ಹೊಸೂರು: ಸಾಲಿಗ್ರಾಮ ತಾಲೂಕಿನ ಕುಪ್ಪೆ ಕೃಷಿಪತ್ತಿನ ಸಹಕಾರ ಸಂಘ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಚಿಕ್ಕಕೊಪ್ಪಲು ಸಿ.ಬಿ.ಸಂತೋಷ್ ಮತ್ತು ಉಪಾಧ್ಯಕ್ಷರಾಗಿ ಕಲ್ಯಾಣಮ್ಮ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿ.ಬಿ.ಸಂತೋಷ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಲ್ಯಾಣಮ್ಮ ಅವರನ್ನು ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸಲಿಲ್ಲ
ಇದರಿಂದ ಚುನಾವಣಾಧಿಕಾರಿಯಾಗಿದ್ದ ಕೆ.ಆರ್.ನಗರ ಸಹಕಾರ ಇಲಾಖೆಯ ಸಿಡಿಓ ಎಸ್.ಎಸ್.ರವಿಕುಮಾರ್ ಅವರು ಇವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಹಾಲಿ ಅಧ್ಯಕ್ಷರಾಗಿದ್ದ ಸೋಮಪ್ಪ ಮತ್ತು ಉಪಾಧ್ಯಕ್ಷ ರಾಗಿದ್ದ ಕೆ.ಆರ್.ಮಂಜುನಾಥ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಈ ಚುನಾವಣೆ ನಡೆಯಿತು.
ನಂತರ ಮಾತನಾಡಿದ ನೂತನ ಅಧಕ್ಷ ಸಿ.ಬಿ.ಸಂತೋಷ್, ಸಂಘದ ನೂತನ ಕಟ್ಟಡ ನಿರ್ಮಾಣ ಮಾಡಲು ಶಾಸಕ ಡಿ.ರವಿಶಂಕರ್ ಅವರ ಸಹಕಾರದೊಂದಿಗೆ ಪ್ರಯತ್ನ ಮಾಡಲಾಗುವುದು ಮತ್ತು ಷೇರುದಾರ ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ಒದಗಿಸಿ ಜಿಲ್ಲಾ ಸಹಕಾರ ಬ್ಯಾಂಕಿನಿಂದ ಸಿಗುವ ಸವಲತ್ತುಗಳನ್ನು ಒದಗಿಸಿ ಕೊಡಲು ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭ ಕುಪ್ಪೆ ಗ್ರಾ.ಪಂ.ಮಾಜಿ ಉಪಾಧ್ಯಇದ್ದರುಉಮ್ಮೇಗೌಡ, ಮಾಯಿಗೌಡನಹಳ್ಳಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಕುಮಾರಸ್ವಾಮಿ, ಸದಸ್ಯೆ ಶೋಭಕರಿಯಯ್ಯ, ಕಾಂಗ್ರೇಸ್ ಮುಖಂಡರಾದ ಸಿ.ಎಚ್.ನವೀನ್, ಸಿ.ಎಸ್.ಗಿರೀಶ್,ಪುಟ್ಟರಾಜು, ಮೀನ್ ಬಾಲಕಿಟ್ಟಿ, ಕಾಡುವಿಜಿ,ರಾಮು,ಸಾಲಿಗ್ರಾಮ ತಾಲೂಕು ಕಾಂಗ್ರೇಸ್ ಸೇವದಳ ಅಧ್ಯಕ್ಷ ಟೈಲರ್ ತಮ್ಮಯ್ಯ ಮತ್ತಿತರರು ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಚುನಾವಣಾ ಸಭೆಯಲ್ಲಿ ಸಂಘದ ನಿರ್ದೇಶಕರಾದ ಡಿ.ಪುನೀತಾ, ವಿಶ್ವೇಶ್ವರಯ್ಯ, ಜವರನಾಯಕ,ಕೆ.ಆರ್.ಮಂಜುನಾಥ್, ಸೋಮಪ್ಪ,ಸತೀಶ್, ಸಿ.ಟಿ.ಸ್ವಾಮೀಗೌಡ,ದಾಸಯ್ಯ, ಕುಮಾರಸ್ವಾಮಿ, ರುಕ್ಮಿಣಿ, ಸಂಘದ ಸಿಇಓ ಜಿ.ಪುನೀತ್ ಕುಮಾರ್, ಗುಮಾಸ್ತ ಸಿ.ಜಿ.ಜಗನ್ನಾಥ್ ಇದ್ದರು.