Friday, July 4, 2025
Google search engine

Homeರಾಜ್ಯಸುದ್ದಿಜಾಲಪಟ್ಟಣದ ಪುರಸಭೆ ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಪಲ್ಲವಿಆನಂದ್ ಅವಿರೋಧವಾಗಿ ಆಯ್ಕೆ

ಪಟ್ಟಣದ ಪುರಸಭೆ ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಪಲ್ಲವಿಆನಂದ್ ಅವಿರೋಧವಾಗಿ ಆಯ್ಕೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಪಟ್ಟಣದ ಪುರಸಭೆಯ ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ೧ನೇ ವಾರ್ಡಿನ ಸದಸ್ಯೆ ಪಲ್ಲವಿಆನಂದ್ ಅವಿರೋಧವಾಗಿ ಆಯ್ಕೆಯಾದರು. ಈವರೆಗೆ ಉಪಾಧ್ಯಕ್ಷೆಯಾಗಿದ್ದ ವಸಂತಮ್ಮಕೃಷ್ಣೇಗೌಡ ಅವರ ರಾಜೀನಾಮೆಯಿಂದ ತೆರನಾಗಿದ್ದ ಸ್ಥಾನಕ್ಕೆ ಪುರಸಭೆಯ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಪಲ್ಲವಿಆನಂದ್ ಅವರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಇವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ಚುನಾವಣಾ ಸಭೆಯಲ್ಲಿ ಅಧ್ಯಕ್ಷ ಡಿ.ಶಿವುನಾಯಕ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಶಂಕರ್, ಸದಸ್ಯರಾದ ಕೋಳಿಪ್ರಕಾಶ್, ಸೈಯದ್‌ಸಿದ್ದಿಕ್, ಕೆ.ಜಿ.ಸುಬ್ರಹ್ಮಣ್ಯ, ಕೆ.ಎಲ್.ಜಗದೀಶ್, ಉಮೇಶ್, ನಟರಾಜು, ವೀಣಾವೃಷಭೆೆoದ್ರ, ಅಶ್ವಿನಿಪುಟ್ಟರಾಜು, ಕೆ.ಎಸ್.ಶಂಕರ್, ನಟರಾಜು, ಬಿ.ಎಸ್.ತೋಂಟದಾರ್ಯ, ಸರೋಜಮಹದೇವ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್ ಇದ್ದರು.

ನೂತನ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಪಲ್ಲವಿಆನಂದ್ ಮಾತನಾಡಿ ಪಕ್ಷದ ವರಿಷ್ಠರು ನನಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇನೆಂದು ತಿಳಿಸಿದರಲ್ಲದೆ ಶಾಸಕ ಡಿ.ರವಿಶಂಕರ್ ಮತ್ತು ಎಂಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ದೊಡ್ಡಸ್ವಾಮೇಗೌಡ ಮತ್ತು ಪುರಸಭೆಯ ಸರ್ವ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ಉಪಾಧ್ಯಕ್ಷರ ಆಯ್ಕೆ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಾಚರಣೆ ನಡೆಸಿದರು. ಉಪಾಧ್ಯಕ್ಷೆ ಪಲ್ಲವಿಆನಂದ್ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ತಾಲೂಕು ವಕ್ತಾರ ಸೈಯದ್‌ಜಾಬೀರ್, ಕಾಂಗ್ರೆಸ್ ಮುಖಂಡರಾದ ಮಧುವನಹಳ್ಳಿಆದರ್ಶ, ಧರ್ಮರಾಜು, ಜಗದೀಶ್, ಆಟೋಮನು, ಕುಮಾರ್, ಕಾರ್ತಿಕ್, ಶಾಮಿಯಾನಕಿರಣ್, ಮನು, ಟಿಎಪಿಸಿಎಂಎಸ್‌ನ ಮಾಜಿ ನಿರ್ದೇಶಕ ಡಿ.ಸಿ.ರವಿ ಅಭಿನಂದಿಸಿದರು.

ಚುನಾಯಿತ ಜನಪ್ರತಿನಿಧಿಗಳು ಜನರ ಸಂಕಷ್ಟಗಳಿಗೆ ಸದಾ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಎಂಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ದೊಡ್ಡಸ್ವಾಮೇಗೌಡ ಹೇಳಿದರು. ಪಟ್ಟಣದ ಪುರಸಭೆ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಪಲ್ಲವಿಆನಂದ್ ಅವರನ್ನು ಅಭಿನಂದಿಸಿ ಮಾತನಾಡಿದ ಅವರು ಜನರ ಸಂಕಷ್ಟಗಳಿಗೆ ಸ್ಪಂದಿಸುವವರನ್ನು ಮತದಾರರು ಎಂದಿಗೂ ಕೈಬಿಡುವುದಿಲ್ಲ. ಈ ವಿಚಾರವನ್ನು ಅರಿತು ನೀವು ಜನಸೇವೆ ಮಾಡಿ ಎಂದರು. ಜನರಿಗೆ ಸೌಲಭ್ಯ ಒದಗಿಸಬೇಕಾದುದು ಪ್ರತಿನಿಧಿಗಳ ಕರ್ತವ್ಯವಾಗಿದ್ದು, ಅವರ ಆಶಯ ಅರಿತು ಅರ್ಹರಿಗೆ ಸರ್ಕಾರದ ಸವಲತ್ತುಗಳನ್ನು ಒದಗಿಸಿ ಎಂದು ಕಿವಿಮಾತು ಹೇಳಿದ ಅವರು ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದರು.

ಮುoದಿನ ದಿನಗಳಲ್ಲಿ ಪಟ್ಟಣವನ್ನು ಸುಂದರ ಮತ್ತು ಸ್ವಚ್ಚವಾಗಿಸಲು ಎಲ್ಲರೂ ಕೆಲಸ ಮಾಡಿ ಮತದಾರರ ಮನ ಗೆದ್ದು, ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿದಬೇಕೆಂದು ಕಿವಿಮಾತು ನುಡಿದರು.


RELATED ARTICLES
- Advertisment -
Google search engine

Most Popular