Sunday, April 20, 2025
Google search engine

Homeರಾಜ್ಯಕಾಂಗ್ರೆಸ್ ನವರು ರೈತರನ್ನು ಸಂಪೂರ್ಣವಾಗಿ ಸಮಾಧಿ ಮಾಡ್ತಾರೆ: ಶಾಸಕ ಜಿ.ಟಿ.ದೇವೇಗೌಡ

ಕಾಂಗ್ರೆಸ್ ನವರು ರೈತರನ್ನು ಸಂಪೂರ್ಣವಾಗಿ ಸಮಾಧಿ ಮಾಡ್ತಾರೆ: ಶಾಸಕ ಜಿ.ಟಿ.ದೇವೇಗೌಡ

ಮಂಡ್ಯ: ಕಾವೇರಿ ಪ್ರತಿಭಟನೆಗೆ ಶಾಸಕ ಜಿ.ಟಿ.ದೇವೇಗೌಡ ಸಾಥ್ ನೀಡಿದ್ದು, ಜೆಡಿಎಸ್‌ ಕಾರ್ಯಕರ್ತರ ದಳಪತಿಗಳು ಜೊತೆ ಹೆಜ್ಜೆ ಹಾಕುತ್ತಿದ್ದಾರೆ.

ಈ ವೇಳೆ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ, ಕಾಂಗ್ರೆಸ್ ನವರು ರೈತರನ್ನು ಸಂಪೂರ್ಣವಾಗಿ ಸಮಾಧಿ ಮಾಡ್ತಾರೆ ಎಂದು ಕಿಡಿಕಾರಿದ್ದಾರೆ.

ಕಾವೇರಿ ನಮ್ಮೆಲ್ಲರ ತಾಯಿ. ಬದುಕಲು ಕಾವೇರಿ ನೀರು ಬೇಕು. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣವೇ ತಮಿಳುನಾಡಿಗೆ ನೀರು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯಗೆ ಬಹಳ ವರ್ಷಗಳ ಅನುಭವ ಇದೆ. ಇವತ್ತಿನ ಪರಿಸ್ಥಿತಿ ಬರಗಾಲ ಬಂದಿದೆ. ಇದನ್ನು ಪ್ರಾಧಿಕಾರದ ಗಮನಕ್ಕೆ ತಂದ್ರ? ಪ್ರಾಧಿಕಾರದ ಮುಂದೆ ಇವರು ಯಾರು ಹೋಗಿಲ್ಲ. ಸರ್ಕಾರ ಬಂದು ಮೂರು ತಿಂಗಳು ಇದೆ. ಬೆಂಗಳೂರಿನವರಿಗೆ ನೀರಿಲ್ಲ. ಬೆಂಗಳೂರಿನಲ್ಲಿ ಯಾವ ಹೋರಾಟ ಇಲ್ಲ. ನೀವೇಲ್ಲರು ನೀರು ಇಲ್ಲದೆ ಉಳಿಯುತ್ತಿರಾ? ರೈತರ ಹೋರಾಟಕ್ಕೆ ಬನ್ನಿ ಎಂದರು.

ಒಂದು ಹನಿ ನೀರು ಕೂಡ ತಮಿಳುನಾಡಿಗೆ ಬಿಡಬಾರದು. ಕಾಂಗ್ರೆಸ್ ಸರ್ಕಾರ ರೈತರ ಜೀವದ ಜೊತೆ ಚೆಲ್ಲಾಟವಾಡ್ತಿದೆ. ನ್ಯಾಯ ದೇವತೆ ಒಪ್ಪುತ್ತಾಳಾ? ಕೂಡಲೇ ಪ್ರಾಧಿಕಾರ ಮುಂದೆ ಹೋಗಿ ಸಂಕಷ್ಟ ಸೂತ್ರ ಅನುಸರಿಸಿದ್ದಿರಾ? ಬರಗಾಲ ಘೋಷಣೆ ಮಾಡಿಲ್ಲ. ರೈತರನ್ನ ಸಂಪೂರ್ಣವಾಗಿ ಸಮಾಧಿ ಮಾಡ್ತಾರೆ ಇವರು.

ಸರ್ಕಾರ ಬರಿ ಗ್ಯಾರಂಟಿ ಗುಂಗಲ್ಲಿ ಇದೆ. ನಿಮ್ಮ ಗೌರವ ಉಳಿದುಕೊಳ್ಳಬೇಕಾದ್ರೆ ನೀರು ನಿಲ್ಲಿಸಿ. ತಮಿಳುನಾಡಿನಲ್ಲಿ ಒಗ್ಗಟ್ಟು ಇದೆ ನಮ್ಮಲ್ಲಿ ಯಾಕೆ ಒಗ್ಗಟ್ಟು ಇಲ್ಲ ಎಂದು ಬೇಸರಿಸಿದರು.

ಸಿಲ್ವರ್ ಜ್ಯೂಬಿಲಿ ಪಾರ್ಕ್ ನಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆದಿದ್ದು, ಜೆಡಿಎಸ್‌ ನಾಯಕರಾದ ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ಡಾ.ಕೆ.ಅನ್ನದಾನಿ, ಹೆಚ್.ಟಿ.ಮಂಜು ಭಾಗಿಯಾಗಿದ್ದಾರೆ.

RELATED ARTICLES
- Advertisment -
Google search engine

Most Popular