ತುಮಕೂರು: ತುಮಕೂರಿನಲ್ಲಿ ಲೋಕಸಭಾ ಕ್ಷೇತ್ರದ ಕಾರ್ಯಕರ್ತರ ಹಾಗೂ ಮುಖಂಡರ ಸಭೆ ನಡೆಸಿದ ಸಚಿವ ಕೃಷ್ಣ ಭೈರೇಗೌಡ ಜನವರಿ ತಿಂಗಳೊಳಗೆ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಫೈನಲ್ ಪಟ್ಟಿ ಬರಲಿದೆ ಎಂದು ಹೇಳಿದ್ದಾರೆ. ನಂತರ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ, ತುಮಕೂರು ಲೋಕಸಭಾ ವ್ಯಾಪ್ತಿಯ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ನಡೆಸಿದ್ದೇನೆ. ಡಾ.ಜಿ.ಪರಮೇಶ್ವರ್, ಕೆ.ಎನ್ ರಾಜಣ್ಣ, ಟಿ.ಬಿ.ಜಯಚಂದ್ರರ ಸಮಕ್ಷಮ ಬೆಂಗಳೂರಿನಲ್ಲಿ ಇನ್ನೊಂದು ಸಭೆ ನಡೆಯಲಿದೆ.
ಆ ಸಭೆಯಲ್ಲಿ ಅಭ್ಯರ್ಥಿಗಳು ಫೈನಲ್ ಆಗಲಿದ್ದಾರೆ.ಜನವರಿ ತಿಂಗೊಳಗೆ ಎಲ್ಲವೂ ಫೈನಲ್ ಆಗಲಿದೆ.ಫೈನಲ್ ಪಟ್ಟಿ ಬಂದು ಅಭ್ಯರ್ಥಿಗಳು ಕ್ಷೇತ್ರದಲ್ಲಿ ಕೆಲಸ ಮಾಡಲಿದ್ದಾರೆ.ಆ ಮೂಲಕ ಐ.ಎನ್.ಡಿ.ಐ.ಎ ಕೂಟ ಹೆಚ್ಚಿನ ಸ್ಥಾನ ಗೆಲ್ಲಬೇಕು.ಕೇಂದ್ರದ ಬಡವರ ವಿರೋಧಿ ಸರ್ಕಾರ ಹೋಗಬೇಕಾಗಿದೆ.
ದಿನೇ ದಿನೇ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬರುತ್ತಿದೆ.ಹಾಗಾಗಿ ಐ.ಎನ್.ಡಿ.ಐ.ಎ ಕೂಟ ಹೆಚ್ಚಿನ ಸ್ಥಾನ ಗೆಲ್ಲುವ ಅವಶ್ಯಕತೆ ಇದೆ.ಕರ್ನಾಟಕದಲ್ಲೂ ಅತಿಹೆಚ್ಚು ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ತಯಾರಿ ನಡೆಸಿದ್ದೇವೆ. ಕಾರ್ಯಕರ್ತರು, ಮುಖಂಡರು ಇಂದಿನ ಸಭೆಯಲ್ಲಿ ತಮ್ಮ-ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಎಲ್ಲವನ್ನೂ ಅವಲೋಕಿಸಿ ಮುಂದಿನ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ.ಸಚಿವ ಕೆ.ಎನ್.ರಾಜಣ್ಣ ಸ್ಪರ್ಧೆ ಮಾಡುತ್ತೇನೆ ಅಂದಿದ್ದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ.ಸದ್ಯದಲ್ಲೇ ನಾನು ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ ಎಂದರು.