ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರಿಗೆ ಕೊಟ್ಟ ೫ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದ ಏಕೈಕ ಸರ್ಕಾರವಾಗಿದೆ ಎಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ವರುಣಾ ಕ್ಷೇತ್ರದ ಮುದ್ದೇಗೌಡನ ಹುಂಡಿ, ಕುಪ್ಪೇಗಾಲ, ಲಲಿತಾದ್ರಿಪುರ, ಲಲಿತಾದ್ರಿನಗರ, ಐಪಿಎಸ್ ಬಡಾವಣೆ ಗುಡುಮಾದನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಕಂದಾಯ ಅದಾಲತ್, ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಬಿಜೆಪಿ ಪಕ್ಷ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಮಂದಿರ, ಹಿಂದುತ್ವ ಎಂದು ಜನರನ್ನು ಮರಳು ಮಾಡಲು ಹೊರಟಿದೆ, ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನರು ಈಗಾಗಲೇ ತಕ್ಕ ಪಾಠ ಕಲಿಸಿದ್ದು ಬರುವ ಲೋಕ ಸಭಾ ಚುನಾವಣೆಯಲ್ಲೂ ಬಿಜೆಪಿಯವರಿಗೆ ಜನರು ಬುದ್ಧಿ ಕಲಿಸುತ್ತಾರೆ ಎಂದರು.
ಮುದ್ದೇಗೌಡನ ಹುಂಡಿಯಲ್ಲಿ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿನ ಘಟಕಬೇಕು. ಗ್ರಂಥಾಲಯಬೇಕು, ಯುವಕರಿಗೆ ಉದ್ಯೋಗ ಬೇಕು, ಹೈ ಮಾಸ್ಕ್‌ಲೈಟ್ ಬೇಕು. ರಸ್ತೆಗೆ ಡಾಂಬರೀಕರಣ, ಕಾಂಕ್ರೀಟ್ ರಸ್ತೆ, ರಸ್ತೆ ಅಗಲೀಕರಣ, ನಿವೇಶನಗಳು, ಮನೆಗಳು ಬೇಕು, ಕೆರೆ ಒತ್ತುವರಿಯಾಗಿದೆ ತೆರವುಗೊಳಿಸಬೇಕು, ಸಿದ್ದರಾಮಯ್ಯನಹುಂಡಿಗೆ ಹೋಗವ ಬಸ್ಸು ನಮ್ಮ ಊರಿನ ಕಡೆಯಿಂದ ಹೋಗಬೇಕು ಎಂದು ಮನವಿ ಮಾಡಿದರು ಇದಕ್ಕೆ ಉತ್ತರಿಸಿದ ಅವರು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬಗ್ಗೆ ಹರಿಸಿಕೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಆಪ್ತ ಸಹಾಯಕ ಶಿವಸ್ವಾಮಿ, ಪ್ರದೀಪ್ ಕುಮಾರ್, ಜಿ.ಪಂ. ಮಾಜಿಸದಸ್ಯ ಕೆಂಪೀರಯ್ಯ, ಎಪಿಎಂಸಿ ಮಾಜಿ ಸದಸ್ಯ ಬಸವರಾಜು, ಬಿಇಓ ವಿವೇಕಾನಂದ, ತಾ.ಪಂ. ಸಹಾಯಕ ನಿರ್ದೇಶಕ ಶಿವಣ್ಣ, ಪಿಡಿಓ ವಿಶ್ವನಾಥ್, ಗ್ರಾ.ಪಂ. ಉಪಾಧ್ಯಕ್ಷೆ ಶಿಲ್ಪ ಶಿವಕುಮಾರ್ ಮುಖಂಡರಾದ ಪುಟ್ಟಣ್ಣ, ಮಹೇಂದ್ರ, ಸೋಮಣ್ಣ, ರಾಮು, ನಾಗರಾಜ್, ಸಿದ್ದರಾಮು, ಸಬ್‌ಇನ್ಸ್‌ಪೆಕ್ಟರ್ ಚೇತನ್ ಹಾಜರಿದ್ದರು.
