ಬಳ್ಳಾರಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಘೋಷಿಸಿದ್ದ ರೈತಪರ ಯೋಜನೆಗಳನ್ನ ಸಂಪೂರ್ಣವಾಗಿ ಕಾಂಗ್ರೆಸ್ ಸರ್ಕಾರ ಕೈಬಿಡಲಾಗಿದೆ ಎಂದು ಆರೋಪಿಸಿ ಬಳ್ಳಾರಿ ಬಿಜೆಪಿ ರೈತ ಮೊರ್ಚಾ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಛೇರಿ ಎದಿರು ಇಂದು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಬಿಜೆಪಿ ಸರ್ಕಾದ ಅವದಿಯಲ್ಲಿ ರೈತರ ಪರವಾಗಿ ಎಪಿಎಂಸಿ ಕಾಯಿದೆ, ಭೂ ಸಿರಿ, ವಿದ್ಯಾಸಿರಿ, ಭೂಮಿ ಮಾರಾಟ ಕಾಯ್ದೆ ಸೇರಿದಂತೆ ಹತ್ತು ಹಲವು ಯೋಜನೆಗಳು ಅನುಷ್ಟಾನ ಮಾಡಲಾಗಿತ್ತು ಆದರೆ, ರೈತ ವಿರೋಧಿ, ಜನವಿರೋಧಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ. ಇವೆಲ್ಲವನ್ನು ಕೈ ಬಿಟ್ಟಿದೆ. ಮತ್ತು ನಮ್ಮ ಅಧಿಕಾರವಧಿಯಲ್ಲಿ ಎಸಿಇಪಿ ಟಿಎಸ್ ಪಿ ಯೋಜನೆಗೆ ಮೀಸಲಿಟ್ಟ ಸಾವಿರಾರು ಕೋಟಿ ಹಣವನ್ನ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗುತ್ತಿರುವುದು ಖಂಡನಿಯ ಎಂದ ಅವರು, ಕಾಂಗ್ರೆಸ್ ದ್ವೇಶ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸೋಮಲಿಂಗಪ್ಪ ಮತ್ತು ಜಿಲ್ಲಾ ಅಧ್ಯಕ್ಷ ಮುರಹರಿಗೌಡ, ರೈತ ಮೊರ್ಚಾ ಗುರುಲಿಂಗನ ಗೌಡ, ಮಹಿಳಾ ಮುಂಡರು, ಮಾಜಿ ಪಾಲಿಕೆ ಸದಸ್ಯರು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
