Friday, April 4, 2025
Google search engine

Homeರಾಜಕೀಯಕಾಂಗ್ರೆಸ್ ಸರ್ಕಾರದಿಂದ ಕೋಮುಬೀಜ ಬಿತ್ತುವ ಕೆಲಸ: ವಿಪಕ್ಷ ನಾಯಕ ಆರ್ ಅಶೋಕ್ ಆರೋಪ

ಕಾಂಗ್ರೆಸ್ ಸರ್ಕಾರದಿಂದ ಕೋಮುಬೀಜ ಬಿತ್ತುವ ಕೆಲಸ: ವಿಪಕ್ಷ ನಾಯಕ ಆರ್ ಅಶೋಕ್ ಆರೋಪ

ಮಂಡ್ಯ: ಕಾಂಗ್ರೆಸ್ ಸರ್ಕಾರ ಜನರಲ್ಲಿ ಕೋಮುಬೀಜ ಬಿತ್ತುವ ಕೆಲಸದಲ್ಲಿ ನಿರತವಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಮಂಡ್ಯದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಆರ್. ಅಶೋಕ್ ಅವರು ಮಾತನಾಡಿ, ಮಂಡ್ಯದಲ್ಲಿ ಚುನಾಯಿತ ಪ್ರತಿನಿಧಿಗಳು ಹಿಂದೂ ವಿರೋಧಿ ಧೋರಣೆ ತಾಳುತ್ತಿದ್ದಾರೆ. ಕಳೆದ ವರ್ಷ ಹನುಜ ಧ್ವಜಕ್ಕೆ ಅಗೌರವ ತಂದಿದ್ದಾರೆ. ಮತ್ತೆ ಗಣೇಶ ಉತ್ಸವದ ಮೇಲೆ ಕಲ್ಲು ತೂರಾಟ, ಬಾಂಬ್ ಗಳನ್ನ ಎಸೆದಿದ್ದಾರೆ. ಸರ್ಕಾರನೇ ಮುಸ್ಲಿಂ ಭಯೋತ್ಪಾದಕರಿಗೆ ಕುಮ್ಮಕ್ಕು ಕೊಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.

ಈಗಾಗಲೇ ಭಯೋತ್ಪಾದಕರ ಕರ ಪತ್ರದಲ್ಲಿ ಹೇಳಿದ್ದಾರೆ. ಇನ್ನು ಮೂವತ್ತು ವರ್ಷದಲ್ಲಿ ಭಾರತವನ್ನ ಪಾಕಿಸ್ತಾನ ಮಾಡುತ್ತೇವೆ ಎಂದು ಆರೋಪ ಕೇಳಿ ಬರ್ತಿವೆ. ಮಂಡ್ಯದಲ್ಲಿ 95 ಪರ್ಸೆಂಟ್ ಹಿಂದೂಗಳು ಇದ್ದಾರೆ. ಇಲ್ಲಿ ಕೋಮು ದಳ್ಳೂರಿ ಹಚ್ಚುತ್ತಿದ್ದಾರೆ. ಕಳೆದ ಬಾರಿ ಕೂಡ ಗಲಾಟೆ ಆಗಿತ್ತು. ಕಾಮನ್ ಸೆನ್ಸ್ ಇಲ್ಲದ ಸರ್ಕಾರ ಎಸ್ ಪಿ, ಡಿಸಿ ಅವರನ್ನ ಅಮಾನತು ಮಾಡಬೇಕಿತ್ತು ಕೆಳ ಹಂತದ ಅಧಿಕಾರಿಗಳನ್ನ ಅಮಾನತು‌ ಮಾಡಿದ್ದಾರೆ.
ಜನರಿಗೆ ಮೋಸ ಮಾಡುವ ಕಾರ್ಯ ಸರ್ಕಾರದಿಂದ ನಡೆಯುತ್ತಿದೆ. ನಾವು ನಾಗಮಂಗಲಕ್ಕೆ ಬಂದು ಸಾಂತ್ವನ ಹೇಳಿದ್ದೇವೆ. ನಾನು ಅಲ್ಲಿ ಭಾಷಣ ಮಾಡಿಲ್ಲ ಏಕಾಏಕಿ‌ ನನ್ನ ಮೇಲೆ ಕೇಸ್ ದಾಖಲೆ ಮಾಡಿದ್ದಾರೆ. ವಿಪಕ್ಷ ನಾಯಕನ ಮೇಲೆ ಕೇಸ್ ದಾಖಲು ಮಾಡಿದ್ದಾರೆ. ತಪ್ಪು ಆಗಿದ್ದರೇ ತನಿಖೆ ಮಾಡಿ ಎನ್ನುವ ಅಧಿಕಾರ ವಿಪಕ್ಷ ನಾಯಕನಿಗೆ ಇದೆ. ತನಿಖೆ ಮಾಡಿಎಂದು ಹೇಳಿದ್ದೆ ನನ್ನ ಫೋಸ್ಟ್ ನಲ್ಲಿ ? ಕೂಡ ಹಾಕಿದ್ದೇನೆ. ತನಿಖೆ ಮಾಡಿ ಎನ್ನುವುದು ತಪ್ಪು ? ಪ್ಯಾಲೆಸ್ಟೈನ್ ಧ್ವಜ ಹಿಡಿದ್ರೆ ತಪ್ಪ. ಎಂದು ಅ ಮಂತ್ರಿ ಹೇಳಿದ್ದಾನೆ. ಇಲ್ಲಿ ಹಿಡಿಯುವ ಅವಶ್ಯಕತೆ ಏನಿದೆ? ಕಾಂಗ್ರೆಸ್ ಸರ್ಕಾರ ಕೋಮುಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ನನ್ನ ಬಾಯಿ ಮುಚ್ಚುವ ಕೆಲಸ ಮಾಡುತ್ತಿದೆ. ನನ್ನ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಹುಬ್ಬಳ್ಳಿ ‌ವಿಚಾರವಾಗಿ ಕೂಡ ಕೇಸ್ ಹಾಕಿದ್ದಾರೆ. ಇವರು ಹೇಳಿದ ಹಾಗೆ ಕೇಳಿಕೊಂಡ ಇರಬೇಕು ವಿರೋಧ ಪಕ್ಷ.
ಭ್ರಷ್ಟಾಚಾರದ ಕೂಪವಾಗಿದೆ ಈ ಸರ್ಕಾರಕ್ಕೆ ಬಿಜೆಪಿಯನ್ನ ತುಳಿಯುವ ಷಡ್ಯಂತ್ರ ನಡೆಯುತ್ತಿದೆ.
ಈ ಸರ್ಕಾರ ಇರುವ ಗ್ಯಾರಂಟಿ ಇಲ್ಲ. ಅವರ ಪಾಪದಿಂದಲೇ ಸರ್ಕಾರ ಹೋಗುತ್ತದೆ. ನಮ್ಮ ಮೇಲೆ ಕೇಸ್ ಹಾಕಿದ ಹಾಗೆ ನಿಮಗೂ ಇದೇ ರೀತಿ ಆಗುತ್ತದೆ ಸರ್ಕಾರಕ್ಕೆ ಎಚ್ಚರಿಕೆ ‌ಕೊಡುತ್ತೇನೆ. ಗಣೇಶ ವಿಸರ್ಜನೆ ವೇಳೆ ಸರಿಯಾಗಿ ಬಂದೋಬಸ್ತ್ ಮಾಡಿದ್ರೆ ಗಲಾಟೆ ಆಗುತ್ತಿರಲಿಲ್ಲ. ಗಲಾಟೆ ಮಾಡಿಸಿದವರು ಕಾಂಗ್ರೆಸ್ ನವರು. ಬೆಂಕಿ ಇಟ್ಟಿದ್ದು ನಿವೇ ತಾನೇ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಲವು ಗಲಾಟೆಗಳು‌ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಬಂದ ಮೇಲೆ ಮುಸ್ಲಿಂ ಎದ್ದು ಕುಳಿತಿದ್ದಾರೆ.
ಮುಸ್ಲಿಂ ಪರವಾಗಿ ಕಾಂಗ್ರೆಸ್ ನಾಯಕರು ನಿಲ್ಲುತ್ತಿದ್ದಾರೆ ಜನರ ಪರ ಅಲ್ಲ .ಎಂದು ವಾಗ್ದಾಳಿ ನಡೆಸಿದರು.

ಶಾಸಕ ಮುನಿರತ್ನ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ, ಮುನಿರತ್ನರಿಗೆ ನೋಟಿಸ್ ಕೊಟ್ಟಿದ್ದೇವೆ.
FSL ವರದಿ ಬಂದ ಮೇಲೆ ಕ್ರಮ ಕೈಗೊಳ್ಳುತ್ತೇವೆಂದರು.

ಕಾಂಗ್ರೆಸ್ ‌ನವರು ದೇವೇಗೌಡರ ಕುಟುಂಬವನ್ನ ಮುಗಿಸಲು ಹೊರಟಿದ್ದರು. ಕಾಂಗ್ರೆಸ್ ‌ನವರು ಸಂಚು ಮಾಡಿದ್ದರು. ಅವಾಗ ಯಾಕೆ ಕಾಂಗ್ರೆಸ್ ನ ಒಕ್ಕಲಿಗರು ಹೋರಾಟ ಮಾಡಲಿಲ್ಲ. ಅವಾಗ ಒಕ್ಕಲಿಗತನ ಯಾಕೆ ಪ್ರದರ್ಶನ ಮಾಡಲಿಲ್ಲ. ಇದೀಗ ಸಿದ್ದರಾಮಯ್ಯ ರನ್ನ ಬದಲಾವಣೆ ‌ಮಾಡಿ ಒಕ್ಕಲಿಗರನ್ನ ಸಿಎಂ ಮಾಡಿ.
ಈಗಾಗಲೇ ಕೆಲವರು ಪೆನ್ನು ಪೇಪರ್ ಕೊಡಿ ಎಂದು ಕೇಳಿದ್ದರು. ನಿಮ್ಮ ತರಾ ಡಬಲ್ ಸ್ಟಾಂಡ್ ಆಗಿ ಮಾತನಾಡಲ್ಲ. ನಾವು ಈಗಾಗಲೇ ಹೇಳಿದ್ದೇವೆ‌ ತಪ್ಪು ಮಾಡಿದವರು ಉಪ್ಪು ಕುಡಿಯಲೇ ಬೇಕು ಎಂದಿದ್ದೇವೆ
FSL ವರದಿ ಕೊಡಿ ನೀವು ರಾಜಕಾರಣ ಮಾಡುತ್ತಿದ್ದೀರಿ. ನಾವು ರಾಜಕಾರಣ ಮಾಡುತ್ರಿದ್ದೇವೆ ಕಾನೂನು ಮುಂದೆ ಯಾರು ಇಲ್ಲ. ಈಗಾಗಲೇ ಮುನಿರತ್ನ ಅವರಿಗೆ ನೋಟಿಸ್ ಕೊಟ್ಟಿದ್ದೇವೆ ಎಂದರು.

ಕುಮಾರಸ್ವಾಮಿ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ ವಿಚಾರ ಆರ್. ಅಶೋಕ್ ಅವರು ಮಾತನಾಡಿ, ಸಿಎಂ ಮೇಲೆ, ಡಿಸಿಎಂ ಮೇಲೆ ಆರೋಪ ಬಂದಿದೆ. ಇವರೆಲ್ಲ ಮಾಡಲ್ ಆಗಲಿ. ಇವರೆಲ್ಲ ಸತ್ಯ ಹರಿಶ್ಚಂದ್ರರಲ್ಲವಾ
ಆ ನಂತರ ಕುಮಾರಸ್ವಾಮಿ ಅವರಿಗೆ ಹೇಳುತ್ತೇವೆ. ಕುಮಾರಸ್ವಾಮಿ ಅವರು ಏನು ತಪ್ಪು ಮಾಡಿದ್ದಾರೆ.
ಹೋರಾಟ ಮಾಡಿದ್ರೆ ಸರ್ಕಾರವನ್ನ ಟಿಕೆ ಮಾಡಿದ್ರೆ ಕೇಸ್ ಹಾಕುತ್ತಾರೆ. ಕಾಂಗ್ರೆಸ್ ಸರ್ಕಾರ ಐದು ವರ್ಷ ಇರಲ್ಲ ಎಂದು ಅವರೇ ಹೇಳುತ್ತಿದ್ದಾರೆ. ಪಾಪಾರ್ ಆಗಿರೋ ಸರ್ಕಾರ ಗ್ಯಾರಂಟಿ ಇಲ್ಲದ ಸರ್ಕಾರ ಎಂದರು.

ತಿರುಪತಿ ಲಡ್ಡು ಅಪವಿತ್ರ ವಿಚಾರವಾಗಿ ಪ್ರತಿಕ್ರಿಯಿಸಿ, ನಮಗೂ ನೋವು ಆಗಿದೆ.ತಿರುಪತಿ ‌ಹಿಂದೂಗಳ ಆರಾದ್ಯ ದೈವ. ಈ ರೀತಿ ಮಾಡಿದ್ದರೇ ಕ್ರಮ ತೆಗೆದುಕೊಳ್ಳಬೇಕು. ಹಿಂದುಗಳ ಭಾವನೆಗೆ ದಕ್ಕೆ ಉಂಟಾಗುತ್ತೆ.
ಯಾರೇ ಮಾಡಿದ್ರು ಕ್ಷಮಿಸೋಕೆ ಸಾಧ್ಯ ಇಲ್ಲ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

RELATED ARTICLES
- Advertisment -
Google search engine

Most Popular