ಬೆಂಗಳೂರು : ಸಿಎಂ ಸಿದ್ದರಾಮಯ್ಯನವರೇ, ಜೂನ್ ೪ ರ ನಂತರ ತಾವು ಕಡ್ಡಾಯ ಸ್ವಯಂ ನಿವೃತ್ತಿ ತೆಗೆದುಕೊಳ್ಳಬೇಕಾಗಿರುವುದು ಅನಿವಾರ್ಯ ಅನ್ನುವ ವಿಷಯ ಗುಟ್ಟಾಗಿ ಏನೂ ಉಳಿದಿಲ್ಲ ಎಂದು ವಿಪಕ್ಷ ನಾಯಕ ಅಶೋಕ್ ಲೇವಡಿ ಮಾಡಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಬರೆದುಕೊಂಡಿರುವ ಅವರು, ರಾಜ್ಯದ ಖಜಾನೆ ಖಾಲಿ ಮಾಡಿ ಜನರನ್ನು ಮರಳು ಮಾಡುವ ಗ್ಯಾರೆಂಟಿಗಳನ್ನು, ಬಿಟ್ಟಿ ಭಾಗ್ಯಗಳನ್ನು ನೀಡುವುದೇ ದೊಡ್ಡ ಸಾಧನೆ ಎಂಬ ಭ್ರಮೆಯಲ್ಲಿರುವ ತಮಗೆ ಒಂದು ಸರ್ಕಾರದ ಸಾಧನೆ ಮಾಡುವ ಮಾನದಂಡಗಳೇನು, ಅಭಿವೃದ್ಧಿ ಎಂದರೇನು, ದೂರದೃಷ್ಟಿ ಎಂದರೇನು, ಇವ್ಯಾವುದರ ಪರಿಜ್ಞಾನವೂ ಇಲ್ಲ, ಅದರಲ್ಲಿ ತಮಗೆ ಆಸಕ್ತಿಯೂ ಇಲ್ಲ ಎಂದು ಹೇಳಿದ್ದಾರೆ.