ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ನನ್ನ ಪುತ್ರನನ್ನು ೫ ಸಾವಿರ ರೂಗಳ ಗಿಪ್ಪ್ ಕಾರ್ಡ್ ಹಂಚಿ ಸೋಲಿಸಿದಂತೆ ನನ್ನ ಸೋಲಿಸಲು ೧೦ ಸಾವಿರ ರೂಪಾಯಿಗಳ ಗಿಪ್ಟ್ ಕಾರ್ಡ್ ಹಂಚಲು ಕಾಂಗ್ರೆಸ್ ಸಿದ್ದತೆ ಮಾಡಿ ಕೊಂಡಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೇಸ್ ಪಕ್ಷ ನನ್ನ ಸೋಲಿಸಲು ಇಲ್ಲದ ಷಡ್ಯಂತರ ಮಾಡುತ್ತಿದ್ದು ಮತದಾರರು ಆಮಿಷಗಳಿಗೆ ಬಲಿಯಾಗ ಬೇಡಿ ಎಂದರು
ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ಉತ್ತಮ ಆಡಳಿತ ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಮೆಚ್ಚಿ ಬಿಜೆಪಿ ಜೊತೆ ಕೈ ಜೊಡಿಸಿದ್ದು ರಾಜ್ಯದ ೨೮ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ನರೇದ್ರ ಮೋದಿ ಪ್ರಧಾನಿ ಅಗಲು ಅವಕಾಶ ಮಾಡಿಕೊಡಿ ಎಂದರು.
ಗ್ಯಾರಂಟಿ ಭಾಗ್ಯಗಳನ್ನು ಕೊಡುವ ಸಲುವಾಗಿ ರಾಜ್ಯ ಸರ್ಕಾರ ಪ್ರತಿಯೊಬ್ಬರ ಮೇಲೂ ಲಕ್ಷಾಂತರ ರೂಗಳ ಸಾಲವನ್ನು ಹೇರಿ ಅಭಿವೃದ್ದಿ ಕೆಲಸ ಮಾಡದೇ ರಾಜ್ಯವನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿದ್ದು ಇಂತಹ ಸರ್ಕಾರವನ್ನು ಕಿತ್ತು ಒಗೆಯಲು ತಮಗೆ ಮತ ನೀಡಿ ಎಂದರು
ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ ಕುಮಾರಸ್ವಾಮಿ ಅವರು ಹೆಣ್ಣುಮಕ್ಕಳ ಮುಖ್ಯಮಂತ್ರಿ ಅಗಿದ್ದಾಗ ಸಾಲಮನ್ನಾ ಮಾಡಿ ಸಾರಾಯಿ,ಲಾಟರಿ ನಿಷೇದ ಮಾಡಿದರು ಅದರೆ ಈಗಿನ ಕಾಂಗ್ರೇಸ್ ಅಭ್ಯರ್ಥಿ ವೆಂಕಟರಮಣೇಗೌಡ ಹೆಣ್ಣು ಮಗಳು ಒಬ್ಬಳ ಕೊಡಬೇಕಾದ ಹಣ ಕೊಡದೇ ಅಕೆಯ ಕುಟುಂಬವನ್ನು ಕಣ್ಣಿರಿನಲ್ಲಿ ಕೈ ತೊಳೆಯುವಂತೆ ಮಾಡಿದ್ದು ಇಂತಹವರು ಗೆಲ್ಲಬೇಕಾ ಎಂದು ಪ್ರಶ್ನಿಸಿದರು.
ಛಾಪಕಾಗದ ದರವನ್ನು ಹೆಚ್ಚಿಸಿ ರೈತರಿಗೆ ಸಕಾಲದಲ್ಲಿ ಸಾಲ,ಹೈನುಗಾರಿಕೆ ಪ್ರೋತ್ಸಾಹಧನ ನೀಡದೇ ರೈತರನ್ನು ಶೋಷಣೆ ಜನರ ಮೇಲೆ ಸಾಲದ ಹೊರೆಸಿ ಅಭಿವೃದ್ದಿ ಕಡೆಗಣಿಸಿರುವ ರಾಜ್ಯ ಸರ್ಕರಕ್ಕೆ ತಕ್ಕ ಪಾಠ ಕಲಿಸ ಬೇಕಾದರೇ ಈ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ಮಾಜಿ ಸಚಿವ ನಾಡಗೌಡ ಮಾತನಾಡಿದರು ಇದಕ್ಕು ಮೊದಲು ಹೊಸೂರಿಗೆ ಅಗಮಿಸಿದ ಕುಮಾರಸ್ವಾಮಿ ಅವರನ್ನು ನೂರಾರು ಮಹಿಳೆಯರ ಕಳಸ ಹೊತ್ತು ಮೇರೆವಣಿಗೆ ನಡೆಸಿ ಸ್ವಾಗತಿಸಿದಲ್ಲದೇ ಜೆಡಿಎಸ್ ಕಾರ್ಯಕರ್ತರು ಪಟಾಕಿಸಿ ಕಿತ್ತಳೆ ಮೊಸಂಬಿ ಹಾರ ಹಾಕಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ವಿಧಾನಪರೀಷತ್ ಸದಸ್ಯ ಮಂಜೇಗೌಡ, ಜೆಡಿಎಸ್ ಮುಖಂಡ ಹಳಿಯೂರು ಮಧುಚಂದ್ರ, ಜಿ.ಪಂ.ಮಾಜಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್,ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಹುಣಸೂರು ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಾಜ ಓಡೆಯರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಅಮಿತ್ ದೇವರಹಟ್ಟಿ,ವಸ್ತು ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ ಗೌಡ, ಬಿಜೆಪಿ ಮುಖಂಡ ಹೊಸಳ್ಳಿ ವೆಂಕಟೇಶ್, ಹೊಸೂರು ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಎಸ್.ಟಿ.ಕೀರ್ತಿ, ಹಳಿಯೂರು ಮಹೇಶ್, ಎಚ್.ಆರ್.ಮಧುಚಂದ್ರ, ಎಚ್.ಆರ್.ದಿನೇಶ್ ಜೆಡಿಎಸ್ ಮುಖಂಡರಾದ ಸಿ.ಬಿ.ಲೋಕೇಶ್, ಬಂಡಹಳ್ಳಿ ಕುಚೇಲ್, ಹನಸೋಗೆ ರಾಜೇಶ್, ಬಿ.ರಮೇಶ್,ಎಚ್.ಕೆ.ಕೀರ್ತಿ,ಎಚ್.ಆರ್.ರಾಘವೇಂದ್ರ, ಎಚ್.ಡಿ.ಕೆ.ಭಾಸ್ಕರ್ ಕೋಳಿಕಿಟ್ಟಿ,ಹಳಿಯೂರುಜಗದೀಶ್, ವಿಕ್ರಮ್ ಗೌಡ, ಅವಿರಾಜಣ್ಣ, ಎಚ್.ಟಿ.ಪ್ರಮೋದ್ ಹಳಿಯೂರು ಶ್ರೀಧರ್, ಶ್ರೀರಾಮಪುರ ಪ್ರಶನ್ನ, ದೊಡ್ಡಕೊಪ್ಪಲು ನವೀನ,ಪ್ರವೀಣ,ಕಾಂತ, ಬೆಣಗನಹಳ್ಳಿ ಪ್ರಶನ್ನ, ನಾಡಪ್ಪನಹಳ್ಳಿ ಮಹದೇವ, ಮಟನ್ ಜಮೀಲ್, ಹನಸೋಗೆ ನಾಗರಾಜು, ಬಿಜೆಪಿ ಅಧ್ಯಕ್ಷ ಧರ್ಮ, ಮುಖಂಡ ಎಚ್.ವಿ. ಅನಿಲ್ ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಶ್ರೀರಾಮ ಸಕ್ಕರೆ ಕಾರ್ಖಾನೆ ಮಾರುವ ಹುನ್ನಾರ
ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಮಾರಲು ಈಗಿನ ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸುತ್ತಿದ್ದು ಈ ಹಿಂದೆನೂ ಈ ಸರ್ಕಾರ ಮಾರುವ ಪ್ರಯತ್ನ ಮಾಡಿತ್ತು ಹಾಗೊಂದು ವೇಳೆ ಮಾರುವ ಪ್ರಯತ್ನ ನಡೆಸಿದರೇ ಹೋರಾಟಕ್ಕೆ ಇಳಿಯುತ್ತೇನೆ ಅನುಕಂಪ ಗಿಟ್ಟಿಸಿ ಶಾಸಕರಾದವರು ಈ ಕಾರ್ಖಾನೆಯ ಉಳಿವಿಗೆ ಮುಂದಾಗದೇ ಕೆ.ಆರ್.ನಗರ ಪುರಸಭೆಯ ಮಳಿಗೆಯವರಿಂದ ಕೋಟ್ಯಾಂತರ ರೂಗಳನ್ನು ವಸೂಲಿಗೆ ನಿಂತಿದ್ದಾರೆ.
-ಸಾ.ರಾ.ಮಹೇಶ್ ಮಾಜಿ ಸಚಿವ