ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ : ಕಾಂಗ್ರೆಸ್ ಪಕ್ಷ ಯಾವಾಗಲು ಬಡವರ ಪರ, ಅವರ ಶ್ರೇಯೋಭಿವೃದ್ದಿ ಮತ್ತು ರಕ್ಷಣೆಗಾಗಿ ಪಕ್ಷದ ಹೋರಾಟ ಇದೆ ಎಂದು ಸಚಿವ ಕೆ. ವೆಂಕಟೇಶ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕು ಚಪ್ಪರದಹಳ್ಳಿ, ಬೆಟ್ಟದಪುರ, ಹಲಗನಹಳ್ಳಿ, ಚಿಕ್ಕನೇರಳೆ, ಹಾರನಹಳ್ಳಿ ಗ್ರಾಮಗಳಲ್ಲಿ ಲೋಕಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಮೈಸೂರು ಕೊಡಗು ಜಿಲ್ಲಾ ಕ್ಷೇತ್ರದ ಅಭ್ಯರ್ಥಿ ಎಂ. ಲಕ್ಷ್ಮಣ್ ರವರ ಹಸ್ತದ ಗುರುತಿಗೆ ಮತನಾಡಿ, ಅವರು ನಿಮ್ಮ ಸೇವೆಗೆ ಬದ್ದರಾಗಿದ್ದಾರೆ, ಪ್ರಾಮಾಣಿಕವಾಗಿ ದುಡಿಯುತ್ತಾರೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಅಭ್ಯರ್ಥಿ ಎಂ. ಲಕ್ಷ್ಮಣ್ ನಾನು ಇಂಜಿನಿಯರಿಂಗ್ ಪದವೀಧರ, ಜನರ ಕಷ್ಟವನ್ನು ಅರಿತಿದ್ದೇನೆ, ನಿಮ್ಮ ಸೇವೆಗೆ ಅನುವು ಮಾಡಿಕೊಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ ವಿಜಯ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ರಹಮತ್ ಜಾನ್ ಬಾಬು, ಡಿ.ಟಿ ಸ್ವಾಮಿ, ಮುಖಂಡರಾದ ಸಿ.ಎನ್ ರಾಮೇಗೌಡ, ನಜ್ಮಾ, ಲೋಕೇಶ್, ಸುಂದ್ರೇಶ್ ಸೇರಿದಂತೆ ಪಕ್ಷದ ಹಲವು ಮುಖಂಡರು ಹಾಜರಿದ್ದರು.