ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಯ ಪ್ರನಾಳಿಕೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಹಾಗಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಅವರನ್ನು ಗೆಲ್ಲಿಸಿ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.
ದೊಡ್ಡೆಕೊಪ್ಪಲು, ಲಾಲದೇವನಹಳ್ಳಿ, ಕಗ್ಗೆರೆ, ತಿಪ್ಪೂರು, ಹಂಪಾಪುರ, ದೆಗ್ಗನಹಳ್ಳಿ, ಕನಗನಹಳ್ಳಿ ಸೇರಿದಂತೆ ಭಾಗದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಭೇಟಿ ನೀಡಿ ಸ್ಟಾರ್ ಚಂದ್ರು ಪರ ಮತಯಾಚನೆ ಮಾಡಿ ಮಾತನಾಡಿದ ಅವರು ಮಂಡ್ಯ ಲೋಕಸಭಾ ಚುನಾವಣೆ ಅತಿ ಸೂಕ್ಷ್ಮವಾಗಿ ನಡೆಯಲಿದ್ದು ಹೆಚ್ಚಿನ ಮತ ಕೊಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು. ಸ್ಟಾರ್ ಚಂದ್ರು ಸರಳ ಸಜ್ಜನಿಕೆಯ ವ್ಯಕ್ತಿ ಅಂಥವರನ್ನ ಗೆಲ್ಲಿಸಿಕೊಂಡರೆ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿಗೆ ಸಹಕಾರ ಯಾಗಲಿದೆ ಎಂದರು.
ಮೈತ್ರಿ ಪಕ್ಷಗಳು ಸೇರಿದಂತೆ ಇನ್ನಿತರ ಯಾವುದೇ ಪಕ್ಷಗಳು ಟೀಕೆಗಳನ್ನು ಮಾಡಿದರೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿರುವುದು ನಮ್ಮ ಗುರಿ ಅಧಿಕ ಮತಗಳಿಂದ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸುವುದು. ಪ್ರತಿಯೊಬ್ಬ ಕಾರ್ಯಕರ್ತರು ಸಂಘಟನೆ ಮಾಡುವ ಮೂಲಕ ಮತಗಳನ್ನು ಗ್ರಾಮಗಳಲ್ಲಿ ಹೆಚ್ಚಿಗೆ ಹಾಕಿಸುವಂತಹ ಕಾರ್ಯಕ್ಕೆ ಕಾರ್ಯಕರ್ತರಿಗೆ ಕರೆ ನೀಡಿದರು.
ಏಪ್ರಿಲ್ ೧೮ ಗುರುವಾರ ಚಲನಚಿತ್ರ ನಾಯಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಡ್ಯ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮತ ಪ್ರಚಾರ ಮಾಡಲು ಆಗಮಿಸುತ್ತಿದ್ದಾರೆ ಹಾಗಾಗಿ ಕಾಂಗ್ರೆಸ್ ಮತದಾರರು ಸಾರ್ವಜನಿಕರು ದರ್ಶನ್ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತ ಪ್ರಚಾರಕ್ಕೆ ಸಹಕಾರ ನೀಡಿ ಪ್ರೋತ್ಸಾಹಿಸಿ ಬೆಳಿಗ್ಗೆ ೧೦:೦೦ ಗಂಟೆಗೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಚಾರವನ್ನು ಪ್ರಾರಂಭಿಸುತ್ತಾರೆ ನಂತರ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ರೋಡ್ ಶೋ ಮಾಡಲಿದ್ದಾರೆ ಹಿಂದೂ ಶಾಸಕ ಡಿ ರವಿಶಂಕರ್ ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಟಿ ಘಟಕದ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಕಲ್ಲಹಳ್ಳಿ ಶ್ರೀನಿವಾಸ್, ಮಾಜಿ ಜಿ.ಪಂ ಸದಸ್ಯ ರಾಜಯ್ಯ, ಮಾರ್ಚಳ್ಳಿ ಶಿವರಾಮೇಗೌಡ, ಜಿಲ್ಲಾ ಪರಿಷತ್ ಸದಸ್ಯ ಸುಬ್ಬಯ್ಯ, ಸಮಾಜ ಸೇವಕ ಗಂಧನಹಳ್ಳಿ ವೆಂಕಟೇಶ್, ಪ್ರಶಾಂತ್ ಜೈನ್, ಸಹಕಾರ ಕ್ಷೇತ್ರದ ಸಿದ್ದೇಗೌಡ, ತಾ.ವಕ್ತಾರ ಸೈಯದ್ ಜಾಬೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ, ಪುರಸಭೆ ಸದಸ್ಯ ಕೋಳಿಪ್ರಕಾಶ್, ಮದೇವ್, ನಗರ ಅಧ್ಯಕ್ಷ ರಮೇಶ್, ಎಸ್.ಟಿ ಘಟಕದ ಅಧ್ಯಕ್ಷ ತಿಪ್ಪೂರುಮದೇವ್, ಕಾಂಗ್ರೆಸ್ ಮೀನುಗಾರರ ಸಮಿತಿ ಅಧ್ಯಕ್ಷ ಬೋರನಾಯಕ, ಕುರುಬ ಸಂಘದ ತಾ ಅಧ್ಯಕ್ಷ ಚೀರನಹಳ್ಳಿಶಿವಣ್ಣ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ, ಗ್ರಾಪಂ ಅಧ್ಯಕ್ಷ ಮಂಜು ಹಂಪಾಪುರದೇವರಾಜ್, ಸುಬ್ಬುಲಕ್ಷ್ಮಿ, ರವಿ, ನಾಗೇಶ್, ಮೀನ್‌ನಾಗರಾಜ್, ಸರಿತಾ, ಉಷಾ, ಸಾಲಿಗ್ರಾಮ ರಾಜಯ್ಯ, ಸೇರಿದಂತೆ ಇನ್ನಿತರರು ಹಾಜರಿದ್ದರು