Wednesday, April 9, 2025
Google search engine

Homeರಾಜ್ಯದೇವೇಗೌಡ ಕುಟುಂಬದ 'ಭೂಕಬಳಿಕೆಯ ಪಕ್ಷಿನೋಟ’ ಎಂಬ ಶೀರ್ಷಿಕೆಯ ಜಾಹೀರಾತಿನ ಪ್ರತಿಯನ್ನು ಫ್ಲೆಕ್ಸ್‌ ನಲ್ಲಿ ಮುದ್ರಿಸಿದ ಕಾಂಗ್ರೆಸ್

ದೇವೇಗೌಡ ಕುಟುಂಬದ ‘ಭೂಕಬಳಿಕೆಯ ಪಕ್ಷಿನೋಟ’ ಎಂಬ ಶೀರ್ಷಿಕೆಯ ಜಾಹೀರಾತಿನ ಪ್ರತಿಯನ್ನು ಫ್ಲೆಕ್ಸ್‌ ನಲ್ಲಿ ಮುದ್ರಿಸಿದ ಕಾಂಗ್ರೆಸ್

ಮೈಸೂರು: ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯವರು ನೀಡಿದ್ದರು ಎನ್ನಲಾದ ‘ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಭೂಕಬಳಿಕೆಯ ಪಕ್ಷಿನೋಟ’ ಎಂಬ ಶೀರ್ಷಿಕೆಯ ಜಾಹೀರಾತಿನ ಪ್ರತಿಯನ್ನು ಕಾಂಗ್ರೆಸ್‌ ನಿಂದ ಫ್ಲೆಕ್ಸ್ ಮಾಡಿ ಹಾಕಲಾಗಿದೆ.

ಕಾಂಗ್ರೆಸ್ ಜನಾಂದೋಲನ ಸಮಾವೇಶದ ಹಿನ್ನೆಲೆಯಲ್ಲಿ ಮೆಟ್ರೋಪೋಲ್ ವೃತ್ತದಲ್ಲಿ ಸಾರ್ವಜನಿಕರ ಗಮನಸೆಳೆಯುವ ರೀತಿಯಲ್ಲಿ ಫ್ಲೆಕ್ಸ್ ಹಾಕಲಾಗಿದೆ.

ಇದನ್ನು ಖಂಡಿಸಿ ಜೆಡಿಎಸ್ ಮುಖಂಡರು ಮಾಜಿ ಶಾಸಕ ಸಾ.ರಾ‌.ಮಹೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಕೂಡಲೇ ತೆರವುಗೊಳಿಸಬೇಕು ಎಂದು ಪ್ರತಿಭಟನೆ ನಡೆಸಿದರು. ಸಾ.ರಾ‌.ಮಹೇಶ್ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು.

RELATED ARTICLES
- Advertisment -
Google search engine

Most Popular