Thursday, April 10, 2025
Google search engine

Homeರಾಜಕೀಯದಲಿತರ ಪರ ಇದ್ದೇವೆ ಎಂದು ಹೇಳಿ ಅವರ ಹಣವನ್ನೇ ಕಾಂಗ್ರೆಸ್ ಲೂಟಿ‌ ಮಾಡಿದೆ: ಆರ್.ಅಶೋಕ್ ವಾಗ್ದಾಳಿ

ದಲಿತರ ಪರ ಇದ್ದೇವೆ ಎಂದು ಹೇಳಿ ಅವರ ಹಣವನ್ನೇ ಕಾಂಗ್ರೆಸ್ ಲೂಟಿ‌ ಮಾಡಿದೆ: ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆ ಮಾಡಲಾದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಇತಿಹಾಸದಲ್ಲಿ ದಲಿತರಿಗೆ ಮೀಸಲಿಟ್ಟಿದ್ದ 187 ಕೋಟಿ ಹಣ ಲೂಟಿ ಮಾಡಲಾಗಿದೆ. ಯಾವುದೇ ಸರ್ಕಾರ ಮಾಡಿರಲಿಲ್ಲ. ದಲಿತರ ಪರ ಇದ್ದೇವೆ ಅಂತಾ ಹೇಳಿ ಅವರ ಹಣ ಕಾಂಗ್ರೆಸ್ ಲೂಟಿ‌ ಮಾಡಿದೆ ಎಂದು ವಿಧಾನಸೌಧದಲ್ಲಿ ವಿರೋಧ ಪಕ್ಷದ ನಾಯಕ ಆರ್​.ಅಶೋಕ್  ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ವಿರುದ್ಧ ನಾವು ಪ್ರತಿಭಟನೆ ಮಾಡ್ತಿದ್ದೇವೆ. ಸರ್ಕಾರ ನೈತಿಕವಾಗಿ ಸತ್ತು ಹೋಗಿದೆ. ಸಿಎಂಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೋಡಬೇಕು. ಸದನದ ಒಳಗೂ ಹೋರಾಟ ‌ಮಾಡುತ್ತೇವೆ. ಸಿಎಂ ಬಚಾವ್ ಆಗುವುದಕ್ಕೆ ನಿವೃತ್ತ ಜಡ್ಜ್ ಮೂಲಕ ನ್ಯಾಯಾಂಗ ತನಿಖೆ ಮಾಡಿಸುತ್ತಿದ್ದಾರೆ. ಸಿಎಂ ಬಚಾವ್ ಆಗೋಕೆ ನಿವೃತ್ತ ಜಡ್ಜ್ ಮುಖಾಂತರ ಇವರ ಮೇಲೆ ಆರೋಪ ಬಂದ್ರೆ ನ್ಯಾಯಂಗ ತನಿಖೆ ಆಗಬೇಕು. ಮುಡಾ ಕೇಸ್​​ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ವಿಧಾನಸೌಧದಲ್ಲಿ ವಿರೋಧ ಪಕ್ಷದ ನಾಯಕ ಆರ್​.ಅಶೋಕ್ ಒತ್ತಾಯಿಸಿದರು.

ಇನ್ನು ಮತ್ತೊಂದೆಡೆ ಮುಡಾ ಪ್ರಕರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಮುಡಾ ಪ್ರಕರಣದ ತನಿಖೆಯನ್ನು ಕೂಡಲೇ ಸಿಬಿಐಗೆ ಕೊಡಬೇಕು ಎಂದು ವಿಧಾನಸೌಧದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ಸರ್ಕಾರದ ಅಕ್ರಮಗಳ ವಿರುದ್ಧ ಸದನದ ಹೊರಗೆ, ಒಳಗೆ ಹೋರಾಟ ಮಾಡುತ್ತೇವೆ. ಮುಖ್ಯಮಂತ್ರಿ ಸ್ಥಾನದಲ್ಲಿ ಕೂರುವ ನೈತಿಕತೆ ಕಳೆದುಕೊಂಡಿದ್ದಾರೆ. ರಾಜೀನಾಮೆ ಕೊಡುವವರೆಗೂ ನಾವು ಹೋರಾಟ ಮಾಡುತ್ತೇವೆ. ನಾಗೇಂದ್ರ ಬಂಧನವಾಗಿದ್ದಾರೆ, ಶಾಸಕ ದದ್ದಲ್ ಕಾಣೆಯಾಗಿದ್ದಾರೆ. ಕಾಣೆಯಾದ ಶಾಸಕ ದದ್ದಲ್​ರನ್ನು ಸರ್ಕಾರ ಹುಡುಕಿಕೊಡಬೇಕು ಎಂದು ಕಿಡಿಕಾರಿದರು.

ಸಿಎಂಗೆ ತಾಕತ್‌ ಇದ್ರೆ ಸಿಬಿಐ ತನಿಖೆಗೆ ಕೊಡಬೇಕು. ನ್ಯಾಯಾಂಗ ತನಿಖೆ ಅಂತ ನಾಟಕ‌ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಹಗರಣ. ಸಿಎಂ ರಾಜೀನಾಮೆ ಕೊಡಬೇಕು. ದಲಿತರ ಹೆಸರಲ್ಲಿ ಅಧಿಕಾರಕ್ಕೆ ಬಂದು ದಲಿತರ ಹಣ ದೊಚಿದ್ದಾರೆ. ಕಾಂಗ್ರೆಸ್ ಸರ್ಕಾರದ ಬಂಡವಾಳ ಬಯಲಾಗಿದೆ. ಸಿಎಂ ನೈತಿಕತೆ ‌ಕಳೆದುಕೊಂಡಿದ್ದೀರಿ. ಡಿಸಿಎಂ ಆರೋಪಿಗಳಿಗೆ ಕ್ಲೀನ್ ಚಿಟ್ ಕೊಡ್ತಾ ಇದ್ದಾರೆ. ಮುಡಾ ಹಗರಣ ಸಿಬಿಐಗೆ ವಹಿಸಬೇಕು. ವಾಲ್ಮೀಕಿ ನಿಗಮದ ಹಗರಣಕ್ಕೆ ಸದನದಲ್ಲಿ ಸಿಎಂ ಉತ್ತರ ಕೋಡಬೇಕು. ವಾಲ್ಮೀಕಿ ನಿಗಮದ ಬಗ್ಗೆ ನಿಳುವಳಿ‌ ಸೂಚನೆ ಕೊಟ್ಟಿದ್ದೇವೆ. ಇವತ್ತು ಚರ್ಚೆಗೆ ಅವಕಾಶ ಕೊಡುತ್ತೇವೆ ಎಂದರು.

ಸಿದ್ದರಾಮಯ್ಯ ಪ್ರಾಮಾಣಿಕರಾಗಿದ್ದರೆ ನಿಷ್ಪಕ್ಷಪಾತ ತನಿಖೆ ಆಗಲಿ. ಎಲ್ಲದಕ್ಕೂ ಸಿಎಂ ಸಿದ್ದರಾಮಯ್ಯ ಸದನದಲ್ಲಿ‌ ಉತ್ತರ ಕೊಡಬೇಕು. ವಾಲ್ಮೀಕಿ ಹಗರಣ ಬಗ್ಗೆ ಚರ್ಚೆಗೆ ನಿಲುವಳಿ‌ ಸೂಚನೆ ನೀಡಲಾಗಿದೆ. ಯಾವ ಸರ್ಕಾರ ಇದ್ದಾಗ ಮುಡಾದಲ್ಲಿ ಹಗರಣ ಆಗಿದೆ, ದಾಖಲೆ ಕೊಡಿ. ರಾಜ್ಯಪಾಲರಿಗೆ ದೂರು ನೀಡುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

RELATED ARTICLES
- Advertisment -
Google search engine

Most Popular