ಮಂಡ್ಯ: ಕಾಂಗ್ರೆಸ್ ಅಧಿಕಾರಕ್ಕೆ ಬಂದು 14 ತಿಂಗಳು ಕಳೆದಿದೆ. ಫ್ರೀ ಯೋಜನೆ ಕೊಡ್ತಾರೆ ಎಂದು ಜನರು ಮತ ಕೊಟ್ಟರು. ಆದ್ರೆ ‘ಫ್ರೀಯಾಗಿ ದುಡ್ಡು ಹೊಡೆಯೋಕೆ ಕಾಂಗ್ರೆಸ್ ಸ್ಕೀಮ್’ ಹಾಕಿಕೊಂಡಿದೆ ಎಂದು ಮೈಸೂರು ಚಲೋ ಪಾದಯಾತ್ರೆ ಕುರಿತು ತುರ್ತು ಸುದ್ದಿಗೋಷ್ಠಿ ನಡೆಸಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ಮಂಡ್ಯದ ಪತ್ರಕರ್ತರ ಸಂಘದಲ್ಲಿ ನಡೆಯುತ್ತಿರುವ ಸುದ್ದಿಗೋಷ್ಠಿಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ‘ಸಿದ್ದರಾಮಯ್ಯನವರೇ 40 ವರ್ಷದ ರಾಜಕೀಯ ಜೀವನ ಕ್ಲೀನ್ ಅಂತೀರಾ. ಕ್ಲೀನ್ ಆಗಿ 14 ಸೈಟ್ ನುಂಗಿದ್ದೀರಾ, ನೀವು ಯಾವ ಸೀಮೆ ಕ್ಲೀನ್. ಕೆಂಪಣ್ಣ ವರದಿ ಏನ್ ಕೊಟ್ಟರೂ ಅದನ್ನ ತಿಳಿಸಬೇಕು. ಇವಾಗ ದೇಸಾಯಿ ಆಯೋಗ ಮಾಡಿದ್ದೀರಾ, ಇದರ ವರದಿ ಎಷ್ಟು ದಿನಕ್ಕೆ ಕೊಡ್ತೀರಾ. ಆರು ತಿಂಗಳಾ, 6 ವರ್ಷನ, 60 ವರ್ಷಗಳಾ?. ಜನರು ಯಾರು ನಿಮ್ಮನ್ನ ಕ್ಲೀನ್ ಅಂತಿಲ್ಲ. ನಿಮಗೆ ನೀವೇ ಕ್ಲಿನ್ ಎಂದುಕೊಳ್ಳುತ್ತಿದ್ದೀರಾ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಆರ್ ಅಶೋಕ್, ಸಿದ್ದರಾಮಯ್ಯ ಮುಡಾ ಹಗರಣ, ಸೈಟ್ ಹಂಚಿಕೆ ಸಂಬಂಧ ಕೆಲವು ಮಹತ್ವದ ದಾಖಲೆ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಸುದ್ದಿಗೋಷ್ಟಿಯಲ್ಲಿ ಚಲವಾದಿ ನಾರಾಯಣ್ ಸ್ವಾಮಿ,ಮಾಜಿ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್, ಕೆ.ಗೋಪಾಲಯ್ಯ, ಅರವಿಂದ್ ಬೆಲ್ಲದ್ ಸೇರಿ ಹಲವರು ಭಾಗಿಯಾಗಿದ್ದರು.