Thursday, March 26, 2026
Google search engine

Homeರಾಜಕೀಯಉಪಚುನಾವಣೆ ಅಖಾಡದಲ್ಲಿ ಲಿಂಗಾಯತ-ಅಹಿಂದ ಕಾರ್ಡ್ ಮೂಲಕ ಕಾಂಗ್ರೆಸ್ ತಂತ್ರ ಆರಂಭ

ಉಪಚುನಾವಣೆ ಅಖಾಡದಲ್ಲಿ ಲಿಂಗಾಯತ-ಅಹಿಂದ ಕಾರ್ಡ್ ಮೂಲಕ ಕಾಂಗ್ರೆಸ್ ತಂತ್ರ ಆರಂಭ

ಬೆಳಗಾವಿ : ಗಡಿಜಿಲ್ಲೆಯ ಮೂವರು ಘಟಾನುಘಟಿ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಉಪಚುನಾವಣೆಯಲ್ಲಿ ಗೆಲ್ಲಿಸುವ ಟಾಸ್ಕ್ ನೀಡಿದೆ. ಸೂಚನೆ ಬೆನ್ನಲ್ಲೇ ಬೆಳಗಾವಿ ನಾಯಕರು ಅಖಾಡಕ್ಕಿಳಿದಿದ್ದಾರೆ.

ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಹೊಣೆಗಾರಿಕೆ ಸಚಿವ ಸತೀಶ್ ಜಾರಕಿಹೊಳಿ ಹೆಗಲಿಗೆ ಹಾಕಿದ್ದಾರೆ. ದಾವಣಗೆರೆಯಲ್ಲಿ ಗೆಲ್ಲಿಸುವ ಜವಾಬ್ದಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ನೀಡಲಾಗಿದೆ. ಈ ಎರಡೂ ಕ್ಷೇತ್ರದಲ್ಲಿ ಸ್ಟಾರ್ ಪ್ರಚಾರಕರಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರನ್ನು ಹೈಕಮಾಂಡ್ ನೇಮಕ ಮಾಡಿದೆ.

ಸಂಘಟನಾ ಚತುರತೆ ಹಿನ್ನೆಲೆ ಮೂವರು ನಾಯಕರಿಗೆ ಟಾಸ್ಕ್ ನೀಡಲಾಗಿದ್ದು, ಸವದಿ, ಜಾರಕಿಹೊಳಿ, ಹೆಬ್ಬಾಳ್ಕರ್‌ಗೆ ಜಿದ್ದಾಜಿದ್ದಿನ ಚುನಾವಣೆ ಎದುರಿಸಿದ ಅನುಭವ ಇದೆ. ಹೀಗಾಗಿ ಲಿಂಗಾಯತ ಹಾಗೂ ಅಹಿಂದ ಕಾರ್ಡ್ ಬಳಸಿ, ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಮೂವರು ನಾಯಕರು ತಂತ್ರ ರೂಪಿಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular