ಪಿರಿಯಾಪಟ್ಟಣ: ತಾಲೂಕಿನ ಕಂಪಲಾಪುರ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿಗರಾದ ಜಾನಕಿ ಉಪಾಧ್ಯಕ್ಷರಾಗಿ ಸುಮ ಅವಿರೋಧ ಆಯ್ಕೆಯಾದರು.
ಗ್ರಾ.ಪಂ ಕಚೇರಿಯಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜಾನಕಿ ಉಪಾಧ್ಯಕ್ಷ ಸ್ಥಾನಕ್ಕೆ ಸುಮ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆ ಚುನಾವಣಾಧಿಕಾರಿ ಬಿಇಓ ಬಸವರಾಜು ಅವಿರೋಧ ಆಯ್ಕೆ ಘೋಷಿಸಿದರು.
ಫಲಿತಾಂಶ ಬಳಿಕ ಕಾಂಗ್ರೆಸ್ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಪಕ್ಷದ ವರಿಷ್ಠರ ಪರ ಜೈಕಾರ ಕೂಗಿ ಸಂಭ್ರಮಿಸಿ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಈ ಸಂದರ್ಭ ಗ್ರಾ.ಪಂ ಸದಸ್ಯರಾದ ರಾಣಿ, ರವಿ, ಮಮತ, ಮಂಜುನಾಥ್, ರಾಮಲಿಂಗಂ, ಶೀಲಾ, ಸೋಮಶೇಖರ್, ಸಣ್ಣತಮ್ಮಯ್ಯ, ಪ್ರತಿಭಾ, ಪಿಡಿಓ ಪರಮೇಶ್, ಕಾರ್ಯದರ್ಶಿ ಸುಷ್ಮಾ ಮತ್ತು ಸಿಬ್ಬಂದಿ, ವೆಂಕಟರಾಮು, ಶಿವಕುಮಾರ್, ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.