ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದು, ಬಿಜೆಪಿಯಂತೆಯೇ ಕಾಂಗ್ರೆಸ್ ಕೂಡ ಬಂಡಾಯ ಅಭ್ಯರ್ಥಿಗಳನ್ನು ಅಮಾನತುಗೊಳಿಸಿದೆ. ಪಕ್ಷ ವಿರೋಧಿ ಚಟುವಟಿಕೆಗಾಗಿ ಮಹಾರಾಷ್ಟ್ರ ಕಾಂಗ್ರೆಸ್ 28 ಬಂಡಾಯ ಅಭ್ಯರ್ಥಿಗಳನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಿದೆ.
ಅಮಾನತುಗೊಂಡಿರುವ ನಾಯಕರಲ್ಲಿ ಶಾಮಕಾಂತ್ ಸನೇರ್, ರಾಜೇಂದ್ರ ಠಾಕೂರ್, ಅಬಾ ಬಾಗುಲ್, ಮನೀಶ್ ಆನಂದ್, ಸುರೇಶ್ ಕುಮಾರ್ ಜೇತ್ಲಿಯಾ, ಕಲ್ಯಾಣ್ ಬೋರಾಡೆ ಮತ್ತು ಚಂದ್ರಪಾಲ್ ಚೌಕ್ಸೆ ಸೇರಿದ್ದಾರೆ. ಶನಿವಾರ ಎಂಪಿಸಿಸಿ ಇತರ 21 ಬಂಡಾಯ ಅಭ್ಯರ್ಥಿಗಳನ್ನು ಅಮಾನತುಗೊಳಿಸಿತ್ತು. ಈ ಮೂಲಕ 22 ಕ್ಷೇತ್ರಗಳಲ್ಲಿ ಒಟ್ಟು ಅಮಾನತುಗೊಂಡವರ ಸಂಖ್ಯೆ 28 ಕ್ಕೆ ಏರಿದೆ.
ಈ ಹಿಂದೆ ಅಮಾನತುಗೊಂಡಿರುವ ನಾಯಕರ ಪಟ್ಟಿಯಲ್ಲಿ ಆನಂದರಾವ್ ಗೆಡಂ, ಶಿಲು ಚಿಮುರ್ಕರ್, ಸೋನಾಲ್ ಕೋವೆ, ಭರತ್ ಯೆರೆಮೆ, ಅಭಿಲಾಶಾ ಗವಟೂರೆ, ಪ್ರೇಮಸಾಗರ್ ಗನ್ವೀರ್, ಅಜಯ್ ಲಾಂಜೇವರ್, ವಿಲಾಸ್ ಪಾಟೀಲ್, ಆಸ್ಮಾ ಜಾವದ್ ಚಿಖ್ಲೇಕರ್, ಹಂಸಕುಮಾರ್ ಪಾಂಡೆ, ಕಮಲ್ ವ್ಯಾವಹರೆ, ಮೋಹನ್ರಾವ್ ದಾಂಡೇಕರ್, ಮಂಗಲ್ ವಿಲಾಸ್, ಮಂಗಲ್ ವಿಲಾಸ್ ಮನೋಜ ಶಿಂಧೆ, ಸುರೇಶ ಪಾಟೀಲಖೇಡೆ, ವಿಜಯ ಖಡ್ಸೆ, ಶಬೀರ್ ಖಾನ್, ಅವಿನಾಶ್ ಲಾಡ್, ಯಗ್ವಾಲ್ಯ ಜಿಚ್ಕರ್, ರಾಜು ಜೋಡೆ ಮತ್ತು ರಾಜೇಂದ್ರ ಮುಕಾಹ್ ಸೇರಿದ್ದಾರೆ.
ಎಐಸಿಸಿ ಉಸ್ತುವಾರಿ ರಮೇಶ್ ಚೆನ್ನಿತ್ತಲ ಅವರ ನಿರ್ದೇಶನದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಹೇಳಿಕೆ ತಿಳಿಸಿದೆ. ಎಐಸಿಸಿ ಉಸ್ತುವಾರಿ ರಮೇಶ್ ಚೆನ್ನಿತ್ತಲ ಅವರ ಸೂಚನೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ನ.20 ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದೆ. ನ.23 ರಂದು ಮತ ಎಣಿಕೆ ನಡೆಯಲಿದೆ.