ಮದ್ದೂರು: ಲೋಕಸಭೆಯಲ್ಲಿ ಕಾಂಗ್ರೆಸ್ 18 ಸ್ಥಾನವನ್ನು ಗೆದ್ದೆ ಗೆಲ್ಲುತ್ತೆ ಎಂದು ಮದ್ದೂರಿನಲ್ಲಿ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹೇಳಿದರು.
ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತೆ. ಎಕ್ಸಿಟ್ ಪೋಲ್ ಅನ್ನ ಮತದಾರ ಹುಸಿ ಮಾಡ್ತಿದ್ದಾರೆ. ನಮ್ಮ ಸರ್ಕಾರ 1ಕೋಟಿ 21 ಲಕ್ಷ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ಹಣ ಕೊಡ್ತಿದೆ. 1ಕೋಟಿ 67 ಲಕ್ಷ ಕುಟುಂಬಗಳಿಗೆ ಉಚಿತ ವಿದ್ಯುತ್. 4 ಕೋಟಿ 44 ಲಕ್ಷ ಜನರಿಗೆ ಅನ್ನಭಾಗ್ಯ 5 kg ಅಕ್ಕಿ ಹಾಗೂ ಹಣ. ಶಕ್ತಿಯೋಜನೆಯಡಿ ಮಹಿಳೆಯರು 220 ಕೋಟಿ ಉಚಿತ ಪ್ರಯಾಣ. ಅರ್ಥಿಕ ಚಟುವಟಿಕೆ ಹೆಚ್ಚಾಗಿದೆ ಎಂದು ಹೇಳಿದರು.
ಈ ಸಮೀಕ್ಷೆ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ಸಹ ಕಾಂಗ್ರೆಸ್ 70-75 ಸೀಟ್ ಬರುತ್ತೆ ಅಂತ ಹೇಳ್ತಿದ್ರು. ಆದರೆ ಕರ್ನಾಟಕದ ಮತದಾರ ಆ ಸಮೀಕ್ಷೆಯನ್ನ ಸುಳ್ಳು ಮಾಡಿ 136 ಸೀಟ್ ಕೊಟ್ಟರು. ನಮ್ಮ ಗ್ಯಾರಂಟಿಯನ್ನ ಜನರು ಕೈ ಹಿಡಿಯುತ್ತಾರೆ. 15 ರಿಂದ 18 ಸ್ಥಾನವನ್ನು ಕಾಂಗ್ರೆಸ್ ಗೆಲ್ಲುತ್ತೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಹೆಚ್ಚಿನ ಬಹುಮತದಿಂದ ಗೆಲ್ತಾರೆ. ಸಿದ್ದರಾಮಯ್ಯ, ಡಿಕೆಶಿ ಅವರು ಹೊಸ ಮೈಷುಗರ್ ಕಾರ್ಖಾನೆ ಕೊಟ್ಟಿದ್ದಾರೆ. 50ಕೋಟಿ ಹಣವನ್ನ ಮೈಷುಗರ್ ಗೆ ಕೊಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ಮಹಿಳೆಯರಿಗೆ 2 ಸಾವಿರ ಸಿಕ್ತಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಬರ ನಿರ್ವಹಣೆಗೆ ಸಹಕಾರಿಯಾಗಿದೆ. ಕಾಂಗ್ರೆಸ್ ಗೆದ್ದೆ ಗೆಲ್ಲುತ್ತೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.