ಬೆಳಗಾವಿ
ಬೆಳಗಾವಿ ಜಿಲ್ಲೆ ಪ್ರವಾಸಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಾಂಬ್ರಾ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತ ಕೋರಿದರು.
ನಾಲ್ಕು ಜೆಸಿಬಿಗಳ ಮೂಲಕ ಪುಷ್ಪವೃಷ್ಠಿ ನಡೆಸಿ ಸಿಎಂ ಅವರನ್ನು ಬರಮಾಡಿಕೊಂಡ ಕಾರ್ಯಕರ್ತರು, ಬಳಿಕ ಕ್ರೇನ್ ಸಹಾಯದಿಂದ ಸೇಬು ಹಾಗೂ ಮೊಸಂಬಿ ಹಣ್ಣುಗಳಿಂದ ತಯಾರಿಸಿದ ಬೃಹತ್ ಹಾರವನ್ನು ಹಾಕಿ ಗೌರವ ಸಲ್ಲಿಸಿದರು.
ಹಾರ ಹಾಕಿದ ಬಳಿಕ ಅದರಲ್ಲಿದ್ದ ಹಣ್ಣುಗಳನ್ನು ಪಡೆಯಲು ಕಾರ್ಯಕರ್ತರು ಪರಸ್ಪರ ಕಿತ್ತಾಡಿಕೊಂಡು ಹಣ್ಣುಗಳನ್ನು ತೆಗೆದುಕೊಂಡು ತಿಂದ ದೃಶ್ಯಗಳು ಗಮನ ಸೆಳೆದವು.
ಇದೇ ವೇಳೆ ಪಟಾಕಿ ಸಿಡಿಸಿ, ಡಿ.ಕೆ. ಶಿವಕುಮಾರ್ ಪರ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಸಾಂಬ್ರಾ ಗ್ರಾಮದಲ್ಲಿ ನಡೆದ ಈ ಅದ್ದೂರಿ ಸ್ವಾಗತ ಕಾರ್ಯಕ್ರಮ ಸಾರ್ವಜನಿಕರ ಗಮನ ಸೆಳೆಯಿತು.



