ಹೈದರಾಬಾದ್: ತೆಲಂಗಾಣದಲ್ಲಿ ೬೩ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಕಾಂಗ್ರೆಸ್ ಕಾರ್ಯಕರ್ತರು ಹೈದರಾಬಾದ್‌ನಲ್ಲಿರುವ ಪಕ್ಷದ ರಾಜ್ಯ ಘಟಕದ ಕಚೇರಿ ಹೊರಗೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಜತೆಗೆ ಹೈದರಾಬಾದ್‌ನಲ್ಲಿರುವ ಪಕ್ಷದ ರಾಜ್ಯ ಮುಖ್ಯಸ್ಥ ರೇವಂತ್ ರೆಡ್ಡಿ ಅವರ ನಿವಾಸದ ಹೊರಗೆ ಪಟಾಕಿ ಸಿಡಿಸಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ೬೩ ಸ್ಥಾನಗಳಲ್ಲಿ, ಬಿಆರ್‌ಎಸ್ ೪೦ ಮತ್ತು ಬಿಜೆಪಿ ೧೦ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಆರ್‌ಎಸ್‌ನ್ನು ಹಿಂದಿಕ್ಕುತ್ತಿದ್ದ ಹಾಗೇ ಕಾಂಗ್ರೆಸ್ ಪಕ್ಷದವರು ಬೈ ಬೈ ಕೆಸಿಆರ್ ಎಂಬ ಘೋಷಣೆಗಳನ್ನು ಮೊಳಗುತ್ತಿದ್ದಾರೆ.
೪೯ ಕೇಂದ್ರಗಳಲ್ಲಿ ಬೆಳಗ್ಗೆ ೮ ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ. ನವೆಂಬರ್ ೩೦ ರಂದು ರಾಜ್ಯದ ೧೧೯ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ೩೫,೬೫೫ ಮತಗಟ್ಟೆಗಳ ಇವಿಎಂಗಳಲ್ಲಿ ದಾಖಲಾದ ಮತಗಳನ್ನು ಎಣಿಕೆ ಮಾಡಲಾಗುತ್ತಿದೆ. ಚಾರ್ಮಿನಾರ್, ಭದ್ರಾಚಲಂ ಮತ್ತು ಆಶ್ವರಪೇಟ ಕ್ಷೇತ್ರಗಳ ಮತ ಎಣಿಕೆ ಅಂತಿಮ ಸುತ್ತುಗಳು ತಲುಪುತ್ತಿದ್ದು, ಈ ಕ್ಷೇತ್ರಗಳ ಫಲಿತಾಂಶ ಶೀಘ್ರವೇ ಹೊರಬೀಳುವ ನಿರೀಕ್ಷೆಯಿದೆ. ಇನ್ನು ಕಾಂಗ್ರೆಸ್ ಸಿಎಂ ಅಭ್ಯರ್ಥಿಯಾಗಿರುವ ರೇವಂತ್?ರೆಡ್ಡಿ ಕಾಮಾರೆಡ್ಡಿ ಮತ್ತು ಕೋಡಂಗಲ್? ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.