Thursday, April 3, 2025
Google search engine

Homeರಾಜ್ಯಸುದ್ದಿಜಾಲಕಾನ್ಸ್ಟೇಬಲ್ ಸೈಯದ್ ಕಬೀರುದ್ದೀನ್ ಗೆ 2023 ನೇ ಸಾಲಿನ ಮುಖ್ಯಮಂತ್ರಿ ಪದಕ

ಕಾನ್ಸ್ಟೇಬಲ್ ಸೈಯದ್ ಕಬೀರುದ್ದೀನ್ ಗೆ 2023 ನೇ ಸಾಲಿನ ಮುಖ್ಯಮಂತ್ರಿ ಪದಕ

ವರದಿ: ಎಡತೊರೆ ಮಹೇಶ್

ಎಚ್ ಡಿ ಕೋಟೆ: 2023 ನೇ ಸಾಲಿನ ಮಾನ್ಯ ಮುಖ್ಯಮಂತ್ರಿ ಪದಕ ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಸೈಯದ್ ಕಬೀರುದ್ದೀನ್ ಗೆ ಲಭಿಸಿದೆ.

ಸೈಯದ್ ಕಬೀರುದ್ದೀನ್ ರವರು ಮೂಲತಹ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮರದೂರು ಗ್ರಾಮದ ಸೈಯದ್ ಗಯಾಸುದ್ದೀನ್ ಮತ್ತು ಆಸೀಯಾಭಿ ರವರ ಮಗನಾಗಿದ್ದು, ಇವರು 2009 ನೇ ಸಾಲಿನಲ್ಲಿ ಇಲಾಖೆಗೆ ಪೊಲೀಸ್ ಕಾನ್ಸ್ಟೇಬಲ್ ಯಾಗಿ ನೇಮಕಗೊಂಡಿದ್ದು ಹುಣಸೂರು ಪಟ್ಟಣ, ಪಿರಿಯಾಪಟ್ಟಣ, ಸರಗೂರು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು ಹಾಲಿ ಹೆಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು 2023 ನೇ ಸಾಲಿನಲ್ಲಿ ಸಾಮಾನ್ಯ ಕಳವು ಮತ್ತು ಮನೆ ಕಳವು ಹಾಗೂ ಕೊಲೆ ಪ್ರಕರಣಗಳಿಗೆ ಸಂಬಂಧ ಪಟ್ಟ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತನಿಖಾಧಿಕಾರಿಗಳಿಗೆ ಸಹಕರಿಸಿರುತ್ತಾರೆ , ಇವರ ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಗುರುತಿಸಿ 2023 ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಪದಕ ವಿಜೇತರಾಗಿ ಘೋಷಣೆ ಮಾಡಿ ಪೊಲೀಸ್ ದ್ವಜ ದಿನಾಚರಣೆಯ ದಿನದಂದು ಮಾನ್ಯ ಮುಖ್ಯಮಂತ್ರಿರವರು ಮುಖ್ಯಮಂತ್ರಿ ಪದಕ ನೀಡಿರುತ್ತಾರೆ. ಅತ್ತ ಮುಖ್ಯಮಂತ್ರಿಗಳ ಪದಕ ನೀಡುತ್ತಿದ್ದಂತೆ ಎಚ್ ಡಿ ಕೋಟೆ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದರು.

ನಂತರ ಇನ್ಸ್ಪೆಕ್ಟರ್, ಗಂಗಾಧರ್ ಮಾತನಾಡಿ ನಮ್ಮ ಪೊಲೀಸ್ ಸಿಬ್ಬಂದಿ ಪದಕ ಪಡೆದಿರುವುದು ನಮ್ಮ ತಾಲೂಕಿಗೆ ಹೆಮ್ಮೆಯ ವಿಚಾರ ಇನ್ನು ಉತ್ತಮ ಕೆಲಸ ನಿರ್ವಹಿಸಲು ಶಕ್ತಿ ಅವರಿಗೆ ಶಕ್ತಿ ಬಂದಂತಾಗಿದೆ ಇದೇ ರೀತಿ ನಮ್ಮ ತಾಲೂಕಿಗೆ ಹೆಮ್ಮೆ ತರುವಂತ ಕೆಲಸಗಳನ್ನು ನಮ್ಮ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆ ನಮ್ಮ ತಾಲೂಕು ವಿಸ್ತಾರವಾದ ತಾಲೂಕು ಹಾಗಾಗಿ ಹಲವಾರು ಸಮಸ್ಯೆಗಳು ಇದ್ದರೂ ಪರಿಹರಿಸಿ ಸಾರ್ವಜನಿಕರಿಗೆ ಕಾನೂನು ಅಡಿಯಲ್ಲಿ ಉತ್ತಮ ಸೇವೆ ಮಾಡುವುದೇ ನಮ್ಮ ಕರ್ತವ್ಯ ಅದೇ ರೀತಿ ನಮ್ಮ ಪೊಲೀಸ್ ಸಿಬ್ಬಂದಿಗಳು ಕೂಡ ಆ ಕೆಲಸದಲ್ಲಿ ಕಾರ್ಯ ನಿರತರಾಗಿದ್ದಾರೆ ಸಾರ್ವಜನಿಕರು ಅಂಜಿಕೆ ಭಯವಿಲ್ಲದೆ ದೂರುಗಳಿದ್ದರೆ ನೇರ ಠಾಣೆಗೆ ಬಂದು ಭೇಟಿ ಮಾಡಬೇಕು ಎಂದರು.

ನಂತರ ಕಾನ್ಸ್ಟೇಬಲ್ ಸೈಯದ್ ರವರಿಗೆ ಅಭಿನಂದನೆ ಸಲ್ಲಿಸಿದರು. ನಂತರ ಎಚ್ ಡಿ ಕೋಟೆ ಪಟ್ಟಣದ ಸಾರ್ವಜನಿಕರು ಮುಖ್ಯಮಂತ್ರಿ ಪದಕ ಪಡೆದಿರುವ ಪೋಲಿಸ್ ಸೈಯದ್ ಕಬಿರುದ್ದೀನ್ ರವರಿಗೆ ಅಭಿನಂದನೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.

RELATED ARTICLES
- Advertisment -
Google search engine

Most Popular