ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಮಂಡ್ಯ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿಲ್ಲ ಈಗ ಯಾವ ಅಭಿವೃದ್ಧಿ ಮಾಡುತ್ತಾರೆ ಎಂದು ಕೃಷಿ ಸಚಿವ ಎನ್. ಚೆಲುವರಾಯ ಸ್ವಾಮಿ ಪ್ರಶ್ನಿಸಿದರು.
ಸಾಲಿಗ್ರಾಮ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು ಅವರ ಪರವಾಗಿ ಮತ ಪ್ರಚಾರ ನಡೆಸಿ ಹೊಸೂರು ಗ್ರಾಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಅಧಿಕಾರದಲ್ಲಿ ಇದ್ದಾಗ ಬೇಕಾದಷ್ಟು ಕೆಲಸ ಕಾರ್ಯ ಗಳನ್ನು ಮಾಡಿ ಅಭಿವೃದ್ಧಿ ಪಡಿಸಬಹುದಿತ್ತು, ಆದರೆ ಈಗ ಚುನಾವಣೆ ಗೆಲ್ಲಲ್ಲು ಸುಳ್ಳು ಭರವಸೆ ನೀಡುತ್ತಿದ್ದು ಜನರು ಇವರ ಮಾತಿಗೆ ಮರಳಾಗ ಬೇಡಿ ಕೈ ಪಕ್ಷಕ್ಕೆ ಬೆಂಬಲ ನೀಡಿ ಎಂದರು.
ಕಳೆದ ಹತ್ತು ವರ್ಷಗಳಿಂದ ಸುಳ್ಳು ಹೇಳಿಕೊಂಡು ಬಿಜೆಪಿ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರ ನಡೆಯುತ್ತಿದೆ, ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಾಗಿದ್ದ ತೆರಿಗೆ ಪಾಲಿನ ಹಣವನ್ನು ನೀಡಿಲ್ಲ, ಎಲ್ಲಾ ಅಗತ್ಯ ವಸ್ತ ಮರಿತಿಬ್ಬೇಗೌಡ, ತಾ.ಪಂ.ಮಾಜಿ.ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಕಾಂಗ್ರೇಸ್ ಮುಖಂಡ ಸಿ.ಜೆ.ಪಾಲಕ್ಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಎಪಿಎಂಸಿ ಮಾಜಿ ನಿರ್ದೇಶಕ ಹೆಬ್ಬಾಳು ರಾಜಶೇಖರ್, ಹಳಿಯೂರು ಗ್ರಾ.ಪಂ.ಉಪಾಧ್ಯಕ್ಷ ನೂತನ್ ಗೌಡ, ಮಾಜಿ ಉಪಾಧ್ಯಕ್ಷ ಬಡ್ಡೆಮಂಜಣ್ಣ, ಮಾಯಿಗೌಡನಹಳ್ಳಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಕುಮಾರಸ್ವಾಮಿ, ಕಾಂಗ್ರೇಸ್ ಮುಖಂಡರಾ ಹಳಿಯೂರು ಪ್ರಭಾಕರ್, ಚಿಬುಕಹಳ್ಳಿ ಬಸವರಾಜು,ಎಚ್.ಆರ್. ಪರಶುರಾಮ್, ವಕೀಲ ಪಣಿ, ಸಚಿನ್, ಚಿಕ್ಕಕೊಪ್ಪಲು ನವೀನ, ಯೋಗೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು
