Friday, April 18, 2025
Google search engine

Homeಸ್ಥಳೀಯ‘ಅಂಬೇಡ್ಕರ್’ ಅವರ ಬೃಹತ್ ಭಾವಚಿತ್ರವನ್ನು ಬಿಡಿಸುವ ಮೂಲಕ ಸಂವಿಧಾನ ಜಾಗೃತಿ ಜಾಥಾ

‘ಅಂಬೇಡ್ಕರ್’ ಅವರ ಬೃಹತ್ ಭಾವಚಿತ್ರವನ್ನು ಬಿಡಿಸುವ ಮೂಲಕ ಸಂವಿಧಾನ ಜಾಗೃತಿ ಜಾಥಾ

ಮೈಸೂರು: ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಮೈಸೂರು ಅರಮನೆ ಮುಂಭಾಗ “ಬಾಬಾ ಸಾಹೇಬ್ ಅಂಬೇಡ್ಕರ್” ಅವರ ಬೃಹತ್ ಭಾವಚಿತ್ರವನ್ನು ಬಿಡಿಸಿ ಅದರ ಮೇಲೆ  ದೀಪಗಳನ್ನು ಇಡಲಾಗುವುದು ಎಂದು  ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ

ರಂಗೇಗೌಡ ಅವರು ತಿಳಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಇರುವ ಸುಮಾರು 20ಕ್ಕೂ ಹೆಚ್ಚು  ಚಿತ್ರಕಲಾ ಶಿಕ್ಷಕರು ಭಾವಚಿತ್ರವನ್ನು ಬಿಡಿಸುವರು… ಸಂಜೆ 06-30 ಗಂಟೆಯ ನಂತರ ಅದರ ಮೇಲೆ ದೀಪಗಳನ್ನು ಇಡುವ ಕೆಲಸ ಪ್ರಾರಂಭವಾಗುವುದು. ಅರಮನೆ ವೀಕ್ಷಣೆಗೆ ಬರುವ ಜನರು ಹಾಗೂ ಸಾರ್ವಜನಿಕರು ಇದನ್ನು ನೋಡಿ ಆನಂದಿಸಬಹುದು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬೃಹತ್ ಭಾವಚಿತ್ರವನ್ನು ಬಿಡಿಸುವ ಈ ಕಾರ್ಯಕ್ರಮಕ್ಕೆ (ನಾಳೆ) ಫೆಬ್ರವರಿ 21 ರಂದು ಸಂಜೆ 7 ಗಂಟೆಗೆ ಮೈಸೂರು ಅರಮನೆ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ. ರಾಜೇಂದ್ರ ಅವರು ಚಾಲನೆ ನೀಡಲಿದ್ದಾರೆ.

RELATED ARTICLES
- Advertisment -
Google search engine

Most Popular