ರಾಮನಗರ: ಮಾಗಡಿ ತಾಲೂಕಿನ ಬಿಟ್ಟಸಂದ್ರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥವನ್ನು ಪೂರ್ಣ ಕುಂಭಕಳಸದೊಂದಿಗೆ ಹಾಗೂ ಕಲಾತಂಡದೊಂದಿಗೆ ಸ್ವಾಗತಿಸಲಾಯಿತು.
ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮದ ಅಂಗವಾಗಿ ಬೈಕ್‌ರ್‍ಯಾಲಿ ಆಯೋಜಿಸಲಾಗಿತ್ತು. ಸಂವಿಧಾನದ ಕುರಿತು ರಂಗಯ್ಯ ಅವರು ಉಪನ್ಯಾಸ ನೀಡದರು. ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರುಗಳು ಹಾಗೂ ಸಮುದಾಯದ ಮುಖಂಡರು, ಸಂಘ-ಸಂಸ್ಥೆಯ ಪದಾಧಿಕಾರಿಗಳಿದ್ದರು.
ನಂತರ ಸಂವಿಧಾನ ಜಾಗೃತಿ ಜಾಥಾವು ಬಾಣವಾಡಿ, ಸೋಲೂರು ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿ, ಜಾಗೃತಿ ಮೂಡಿಸಿತು.