ಮೈಸೂರು : ಡಾ. ಬಿ.ಆರ್. ಅಂಬೇಡ್ಕರ್‌ರವರು ರಚಿಸಿರುವ ಭಾರತದ ಸಂವಿಧಾನ ಪ್ರಪಂಚದಲ್ಲಿಯೋ ಶ್ರೇಷ್ಠಸಂವಿಧಾನವಾಗಿದೆಎಂದುರಾಜ್ಯಬುಡಕಟ್ಟು ಸಂಶೋಧನಾ ಸಂಸ್ಥೆಯನಿರ್ದೇಶಕರಾದಡಾ. ಎಲ್. ಶ್ರೀನಿವಾಸ್ ತಿಳಿಸಿದರು.
ಮೈಸೂರಿನ ನ್ಯಾಯಾಂಗ ಬಡಾವಣೆಯಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ನಡೆದ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಸಂವಿಧಾನ ಪೀಠಿಕೆಯನ್ನು ಓದಿದ ನಂತರ ಮಾತನಾಡಿದ ಅವರು, ಭಾರತ ದೇಶದಲ್ಲಿ ಎಲ್ಲಾ ಧರ್ಮದವರಿಗೂ ಎಲ್ಲಾ ಜಾತಿಯವರಿಗೂ ಎಲ್ಲಾ ಪಂಗಡಿದವರಿಗೂ ಸಂವಿಧಾನದಲ್ಲಿ ಸಮಾನವಾದ ಹಕ್ಕುಗಳು, ಸ್ವಾತಂತ್ರ್ಯವನ್ನು ನೀಡಲಾಗಿದೆ.
ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರು ತಿಳಿದುಕೊಂಡು ಪ್ರತಿಯೊಬ್ಬರಿಗೂ ನ್ಯಾಯಸಿಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸಂವಿಧಾನದ ಪ್ರಸ್ತಾವನೆಯನ್ನು ಬುಡಕಟ್ಟುಜನರಿಗೆಆಶ್ರಯಶಾಲೆಯ ಮಕ್ಕಳಿಗೂ ಓದಿ ಹೇಳಬೇಕು ಎಂದರು. ಇದೇ ಸಂದರ್ಭದಲ್ಲಿಕಛೇರಿಯ ಸಿಬ್ಬಂದಿಗಳು ಸಹ ಸಂವಿಧಾನದ ಪ್ರಸ್ಥಾವನೆಯನ್ನು ಸಾಮೂಹಿಕವಾಗಿ ವಾಚಿಸಿದರು.
ಸಮಾರಂಭದಲ್ಲಿರಾಜ್ಯಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಬಿ.ಎಸ್. ಪ್ರಭಾಅರಸ್, ಡಾ. ಮೋಹನ್, ಡಾ. ಮಧುಸೂದನ್, ಡಾ. ಶಂಕರ್, ಡಾ. ಮಂಜುನಾಥ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.