Monday, April 21, 2025
Google search engine

Homeಸ್ಥಳೀಯಭಾರತದ ಸಂವಿಧಾನ ಅಪಾಯದಲ್ಲಿದೆ : ಕೆ. ಮರೀಗೌಡ ಆತಂಕ

ಭಾರತದ ಸಂವಿಧಾನ ಅಪಾಯದಲ್ಲಿದೆ : ಕೆ. ಮರೀಗೌಡ ಆತಂಕ

ಮೈಸೂರು: ಭಾರತದ ಸಂವಿಧಾನ ಅಪಾಯದಲ್ಲಿದ್ದು, ಸಂವಿಧಾನವನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ. ಮರೀಗೌಡ ಆತಂಕ ವ್ಯಕ್ತಪಡಿಸಿದರು.

ಮೈಸೂರಿನ ನಿವೇದಿತನಗರದಲ್ಲಿರುವ ರೋಟರಿಯ ದಿ ಆಕ್ಮಿ ಸ್ಕೂಲ್‌ನಲ್ಲಿ ನಡೆದ ೭೫ನೇ ಗಣರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು ದೇಶಾದ್ಯಾಂತ ೭೫ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು ಮಹಾತ್ಮಗಾಂಧಿ ನೇತೃತ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿ ಹುತಾತ್ಮರಾದವರನ್ನು ನಾವು ಇಂದು ಸ್ಮರಿಸಬೇಕು. ಸ್ವಾತಂತ್ರ್ಯ ನಂತರದಲ್ಲಿ ದೇಶದಲ್ಲಿ ಸಾಮಾಜಿಕ ಅಸಮಾನತೆ, ರಾಜಕೀಯ ಅಸಮಾನತೆ ಸರಿದೂಗಿಸಲು ಡಾ. ಬಿ.ಆರ್. ಅಂಬೇಡ್ಕರ್‌ರವರ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನಾ ಸಮಿತಿ ರಚಿಸಿ, ದೇಶದ ಎಲ್ಲಾ ಬಡವರು, ದಲಿತರು, ಮಹಿಳೆಯರು, ಸುರಕ್ಷಿತವಾಗಿ ಬದುಕಲು ಅತ್ಯಂತ ಉತ್ತಮ ಸಂವಿಧಾನವನ್ನು ರಚಿಸಿ ೧೯೪೯ ನವೆಂಬರ್ ೨೬ರಂದು ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ.

ಸಂವಿಧಾನದ ಆಶಯಗಳನ್ನು ಅನುಷ್ಠಾನಕ್ಕೆ ತರುವುದು, ನಾವೆಲ್ಲಾ ಭಾರತೀಯರು ಒಂದೇ ಎಂದು ಪ್ರಪಂಚಕ್ಕೆ ಸಾರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸ್ವಾತಂತ್ರ್ಯ ನಂತರದಲ್ಲಿ ಭಾಷಾವಾರು ಪ್ರಾಂತ್ಯಾಗಳನ್ನು ವಿಂಗಡಣೆ ಮಾಡಲಾಯಿತು. ಈ ದೇಶದ ಸಮಗ್ರತೆ, ಏಕತೆಗೆ ನಾವೆಲ್ಲರೂ ಹೋರಾಡಬೇಕಾಗಿದೆ. ಮಕ್ಕಳು ಈ ದೇಶದ ಸಂಪತ್ತಾಗಿದ್ದು, ಯುವಶಕ್ತಿಯನ್ನು ದೇಶದ ಸಂಪತ್ತನ್ನಾಗಿ ಮಾಡಿದಾಗ ಈ ದೇಶ ಸುಭದ್ರವಾಗಿರುತ್ತದೆ ಎಂದ ಅವರು ನಾಡಿನ ಜನತೆಗೆ ೭೫ನೇ ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷರಾದ ವೆಂಕಟೇಶ್ವರರಾವ್, ಆರ್. ಅರುಣ್‌ಸಿಂಗ್, ಪ್ರಾಂಶುಪಾಲರಾದ ಆರ್. ಸುಭಾಷಿಣಿ, ರಾಜು ಮುರಳೀಧರ್, ಶಾಲಿನಿ, ರವಿ, ಪ್ರಕಾಶ್ ಹಾಜರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ವಿವಿಧ ವೇಷಭೂಷಣಗಳನ್ನು ಧರಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular