Tuesday, March 10, 2026
Google search engine

Homeಸ್ಥಳೀಯ32 ಎಕರೆ ಮೆಜೆಸ್ಟಿಕ್ ಜಾಗದಲ್ಲಿ ಸಿಂಗಾಪುರ ಮಟ್ಟದ ಬಸ್ ಟರ್ಮಿನಲ್ ನಿರ್ಮಾಣ

32 ಎಕರೆ ಮೆಜೆಸ್ಟಿಕ್ ಜಾಗದಲ್ಲಿ ಸಿಂಗಾಪುರ ಮಟ್ಟದ ಬಸ್ ಟರ್ಮಿನಲ್ ನಿರ್ಮಾಣ

ಬೆಂಗಳೂರು : ಬೆಂಗಳೂರಿನಲ್ಲೊಂದು ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ ತಲೆ ಎತ್ತಲಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ. ಇಂದು (ಮಾರ್ಚ್ 10) ವಿಧಾನಪರಿಷತ್​​ನಲ್ಲಿ ಉತ್ತರ ನೀಡಿದ ರಾಮಲಿಂಗಾರೆಡ್ಡಿ ಅವರು, ಈಗ ಮೆಜೆಸ್ಟಿಕ್​ ವ್ಯಾಪ್ತಿಯಲ್ಲಿ 32 ಎಕರೆ ಜಾಗ ಇದೆ. ಪ್ರತಿದಿನ ಇಲ್ಲಿ 11 ಸಾವಿರ ಬಸ್​​ಗಳ ಸಂಚಾರ ಇರುತ್ತೆ. ಮೆಜೆಸ್ಟಿಕ್​​ನಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಿಸುವ ಉದ್ದೇಶವಿದೆ. ಸಿಂಗಾಪುರಕ್ಕಿಂತಲೂ ಅತ್ಯುತ್ತಮ ಬಸ್​ ನಿಲ್ದಾಣ ಮಾಡುತ್ತೇವೆ. ಬಸ್​​​ ನಿಲ್ದಾಣ ಸಂಬಂಧ ವರದಿ ಪಡೆಯಲು ಸೂಚಿಸಲಾಗಿದೆ. ವರದಿ ಬಂದ ಬಳಿಕ ಕ್ಯಾಬಿನೆಟ್​​​​ನಲ್ಲಿ ಇಟ್ಟು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

‘ಪ್ರಾಜೆಕ್ಟ್ ಮೆಜೆಸ್ಟಿಕ್​​’ ಹೆಸರಿನಲ್ಲಿ ಸರ್ಕಾರ-ಖಾಸಗಿ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಬಸ್​ ನಿಲ್ದಾಣ ಮಾಡಲಾಗುತ್ತೆ. ತಜ್ಞರ ಸಲಹೆ ಪಡೆದು ಬಸ್​​ ನಿಲ್ದಾಣ ನಿರ್ಮಿಸಲು ನಿರ್ಧರಿಸಿದ್ದೇವೆ. ಸಿಂಗಾಪುರಕ್ಕಿಂತ ಉತ್ತಮ ಅಂತಾರಾಷ್ಟ್ರೀಯ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

RELATED ARTICLES
- Advertisment -
Google search engine

Most Popular