Wednesday, April 23, 2025
Google search engine

HomeUncategorizedರಾಷ್ಟ್ರೀಯಮಾವೋವಾದಿಗಳ ಜೊತೆ ಸಂಪರ್ಕ: ಹೈದರಾಬಾದ್‌ ನ ಹಲವು ಸ್ಥಳಗಳಲ್ಲಿ ಎನ್‌ ಐಎ ದಾಳಿ

ಮಾವೋವಾದಿಗಳ ಜೊತೆ ಸಂಪರ್ಕ: ಹೈದರಾಬಾದ್‌ ನ ಹಲವು ಸ್ಥಳಗಳಲ್ಲಿ ಎನ್‌ ಐಎ ದಾಳಿ

ಹೈದರಾಬಾದ್: ಮಾವೋವಾದಿಗಳ ಜೊತೆ ಸಂಪರ್ಕಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ ಐಎ) ತಂಡ ಗುರುವಾರ ಹೈದರಾಬಾದ್‌ ನ ಹಲವು ಸ್ಥಳಗಳಲ್ಲಿ ಶೋಧ ನಡೆಸಿದೆ.

ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳು ಅಷ್ಟಮಠಾಧೀಶ ತೆಲುಗಿನ ಕವಿ ವರವರ ರಾವ್ ಅವರ ಅಳಿಯ ವೇಣುಗೋಪಾಲ್ ಅವರ ನಿವಾಸದಲ್ಲಿ ಶೋಧ ಕಾರ್ಯ ನಡೆಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ವರವರ ರಾವ್ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು.

ಗುರುವಾರ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳ ತಂಡ ಹಿಮಾಯತ್‌ ನಗರ ಮತ್ತು ಎಲ್‌ ಬಿ ನಗರ ಪ್ರದೇಶಗಳಲ್ಲಿಯೂ ಶೋಧ ನಡೆಸುತ್ತಿದ್ದು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

RELATED ARTICLES
- Advertisment -
Google search engine

Most Popular