ಮೈಸೂರು: ಮೈಸೂರಿನಲ್ಲಿ ಚಿರತೆ ದಾಳಿ ಮುಂದುವರೆದಿದ್ದು, ಚಿರತೆ ದಾಳಿಗೆ ಎರಡು ಮೇಕೆ ಬಲಿಯಾಗಿರುವ ಘಟನೆ ಹುಣಸೂರು ತಾಲ್ಲೂಕು ಶ್ರವಣನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರೈತ ಮಹಿಳೆ ಮಹದೇವಮ್ಮ ಅವರಿಗೆ ಸೇರಿದ ಮೇಕೆಗಳು ಚಿರತೆ ದಾಳಿ ಬಲಿಯಾಗಿವೆ.
ಮಾತ್ರವಲ್ಲದೇ ಗ್ರಾಮದ ಸುತ್ತ ಚಿರತೆ ಓಡಾಡುತ್ತಿದ್ದು, ಮನೆಯಿಂದ ಹೊರಗೆ ಬರಲು ಗ್ರಾಮಸ್ಥರು ಭಯಪಡುತ್ತಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.