ಮಂಡ್ಯ: ಸುಪ್ರೀಂ ವಿಚಾರಣೆ ಮುಂದೂಡಿದ್ರು ತಮಿಳುನಾಡಿಗೆ ನಿಲ್ಲದ ಹರಿಯುತ್ತಿರುವ ಕಾವೇರಿ ನೀರು ಹರಿಸುತ್ತಿರುವುದನ್ನ ಖಂಡಿಸಿ ಜಿಲ್ಲೆಯಲ್ಲಿ ಇಂದು ಕೂಡ ಮಂಡ್ಯದ ಹಲವೆಡೆ ಪ್ರತಿಭಟನೆ ಮುಂದುವರೆಯಲಿದೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ಜಿಲ್ಲಾ ರೈತ ಹಿತರಕ್ಷಣಾ ವೇದಿಕೆಯಿಂದ ಧರಣಿ ಮುಂದುವರೆಯಲಿದ್ದು, ಭೂಮಿತಾಯಿ ಹೋರಾಟ ಸಮಿತಿಯಿಂದ ರೈತ ನಾಯಕ ನಂಜುಂಡೇಗೌಡ ನೇತೃತ್ವದಲ್ಲಿ ನೀರಿಲ್ಲದೇ ಒಣಗುತ್ತಿರುವ ಕಬ್ಬು ಪ್ರದರ್ಶಿಸಿ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.
ಮಧ್ಯಾಹ್ನ 12 ಕ್ಕೆ ಶ್ರೀರಂಗಪಟ್ಟಣದ ಕಾವೇರಿ ನದಿ ಸ್ನಾನಘಟ್ಟದ ದಿಂದ ತಾಲೂಕು ಕಚೇರಿವರೆಗೆ ಕಬ್ಬು ಚಳವಳಿ ನಡೆಯಲಿದೆ.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದ ನಿಯೋಗ ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದು, ರೈತಮುಖಂಡರೊಂದಿಗೆ ಸಿಎಂ ಸಿದ್ದರಾಮಯ್ಯ ಚರ್ಚೆ ಮಾಡಲಾಗಿದೆ. ಸಿಎಂ ರವರ ಇಂದಿನ ನಿರ್ಧಾರದ ಮೇಲೆ ರೈತಸಂಘದ ಮುಂದಿನ ಹೋರಾಟದ ಹಾದಿ ನಿರ್ಧಾರವಾಗಲಿದೆ ಎಂದರು.
ಕೆಆರ್ ಎಸ್ ನಲ್ಲಿ ನಡೆಯುತ್ತಿರುವ ಧರಣಿ ಇಂದು ಸ್ಥಗಿತಗೊಳ್ಳಲಿದ್ದು, ಸಿಎಂ ಭೇಟಿ ಬಳಿಕ ರೈತರು ಮೈ-ಬೆಂ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು.