ಕೆ ಆರ್ ಎಸ್ ಡ್ಯಾಮ್ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಳ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು ,ಕೆ ಆರ್ ಎಸ್ ಡ್ಯಾಮ್ ನ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಳವಾಗಿದ್ದು 24 ಗಂಟೆಯಲ್ಲಿ ಸುಮಾರು 4 ಟಿಎಂಸಿ ನೀರು ಡ್ಯಾಮ್ ಗೆ ಹರಿದು ಬಂದಿದೆ. ಸದ್ಯ ಡ್ಯಾಮ್ ನಲ್ಲಿ 26. 811 ಟಿಎಂಸಿ ನೀರು ಶೇಖರಣೆಯಾಗಿದ್ದು, ನೆನ್ನೆ ಬೆಳಿಗ್ಗೆ 22.8 09 ಟಿಎಂಸಿ ನೀರು ಸಂಗ್ರಹವಾಗಿತ್ತು. 49.452 ಟಿಎಂಸಿ ಸಾಮರ್ಥ್ಯದ ಡ್ಯಾಮ್ ನಲ್ಲಿ ಸದ್ಯ ಅರ್ಧದಷ್ಟು ಭರ್ತಿಯಾಗಿದ್ದು 104.80 ಗೆ ಕೆ ಆರ್ ಎಸ್ ನೀರಿನ ಮಟ್ಟ ಹೆಚ್ಚಿದೆ. ಇನ್ನೂ ಸಂಪೂರ್ಣ ಡ್ಯಾಮ್ ಭರ್ತಿಗೆ ಕೇವಲ 20 ಅಡಿ ಬಾಕಿ ಇದೆ .ಸದ್ಯ ಡ್ಯಾಂಗೆ 51, 508 ಕ್ಯೂಸೆಕ್ಸ್ ಒಳಹರಿವಿದ್ದು, 5,156 ಕ್ಯೂಸೆಕ್ಸ್ ನಷ್ಟು ಹೊರ ಹರಿವು ಇದೆ. ಇದೇ ರೀತಿ ಮಳೆ ಮುಂದುವರಿದರೆ 8- 10 ದಿನದಲ್ಲಿ ಕನ್ನಂಬಾಡಿ ಕಟ್ಟೆ ಭರ್ತಿ ಆಗಲಿದೆ .