ಮದ್ದೂರು: ಪುಟ್ಟರಾಜು ಎಚ್ಚರಿಕೆ ಕೊಡೊದಕ್ಕೆ ಕಾಂಗ್ರೆಸ್ ಯಜಮಾನಿಕೆ ಕೊಟ್ಟಿದಿಯಾ? ಜೆಡಿಎಸ್-ಕಾಂಗ್ರೇಸ್ ನಾಯಕರ ಗಂಡಸ್ತನದ ಗುದ್ದಾಟದ ಮದ್ದೂರಿನ ಕೊಪ್ಪದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ.
ಸ್ವಲ್ಪ ಹಿಡಿತದಲ್ಲಿ ಮಾತನಾಡಲು ಅವರ ಪಕ್ಷದ ಮುಖಂಡರಿಗೆ ಎಚ್ಚರಿಕೆ ಕೊಡಬೇಕಿತ್ತು. ಎಲ್ಲರಿಗೂ ತಾಳ್ಮೆ ಇರುತ್ತೆ, ನಾನೇನೋ ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ. ಎಲ್ಲರು ಸಹಿಸಿಕೊಳ್ಳುಲು ಆಗಲ್ಲ. ಇದೇ ಪುಟ್ಟರಾಜು ಇವಾಗ ಎಚ್ಚರಿಕೆ ಕೊಡ್ತಿದ್ದಾರೆ ಹಿಂದೆ ಏನು ಹೇಳಿದ್ರು ಡೆಡ್ಡಾರ್ಸ್ ಸ್ವಾಮಿ ಅಂದಿದ್ರು ಲೋಕಸಭಾ ಚುನಾವಣೆಯಲ್ಲಿ ತಪ್ಪಾಯಿತು ಅಂತ ಕೇಳಿದ್ರು. ಇದಕ್ಕೆಲ್ಲ ನಾನು ಮಾತನಾಡಲ್ಲ. ಅವರು ಗಂಡಸ್ತನ ಅಂತ ಮಾತನಾಡುವ ಅವಶ್ಯಕತೆ ಇತ್ತ? ರಾಜಕೀಯ ಟೀಕೆ ಮಾಡಲಿ ಎಂದು ಹೇಳಿದರು.
ಇದನ್ನು ಸರಿ ಅಂತ ನಾನು ಹೇಳಲ್ಲ, ನಮ್ಮ ಪಕ್ಷದ ಶಾಸಕರು ಹಿತಿಮಿತಿ ಬಿಟ್ಟು ಮಾತನಾಡಲ್ಲ ಅವರು ಅಂದಿರೋದಕ್ಕೆ ಇವರು ಮಾತನಾಡಿದ್ದಾರೆ ಅಷ್ಟೆ. ಪುಟ್ಟರಾಜು ಒಬ್ಬ ಸಿನಿಯರ್ ಲೀಡರ್ ಆಗಿ ವೈಯಕ್ತಿಕ ಟೀಕೆ ಬಿಟ್ಟು ಕೆಲಸ ಮಾಡಿ ಅಂತ ಇಬ್ಬರಿಗೂ ಹೇಳಬೇಕಿತ್ತು. ಅದನ್ನ ಬಿಟ್ಟು ಎಚ್ಚರಿಕೆ, ಯಾರಿಗೆ ಎಚ್ಚರಿಕೆ ಕೊಡ್ತಾರೆ ಏನು ನಮ್ಮ ಬಾಸ್ ಹಾ. ಕಾಂಗ್ರೆಸ್ ಅವರಿಗೇನಾದ್ರು ಯಾಜಮಾನಿಕೆ ಕೊಟ್ಟಿದ್ದಿವಾ? ಒಬ್ಬ ಲೀಡರ್ ಆಗಿ ಒಳ್ಳೆಯ ರೀತಿಯಲ್ಲಿ ಹೇಳಬೇಕು. ನಮ್ಮವರು ಯಾರು ಚರ್ಚೆ ಮಾಡಲ್ಲ ಮುಂದೆ ಆ ರೀತಿಯಲ್ಲಿ ಮಾತನಾಡಬಾರದು. ಹಿಂದೆ ಕೀಳಾಗಿ ಮಾತನಾಡಿದ್ರು ನಾವು ಉತ್ತರ ಕೊಟ್ಟಿಲ್ಲ ಬಿಡಿ ಕೈ ಶಾಸಕನ ಗಂಡಸ್ತನದ ಚರ್ಚೆ ಸಮರ್ಥಿಸಿಕೊಂಡ ಸಚಿವ ಚಲುವರಾಯಸ್ವಾಮಿ.
ಕಾಂಗ್ರೆಸ್ ಕಾರ್ಯಕರ್ತರಿಂದ ಸಹಕಾರ ಆಗಿಲ್ಲ ಅಂತ ಸುಮಲತಾ ಹೇಳಲಿ
ಕಾಂಗ್ರೆಸ್ ಅವಕಾಶ ಕೊಟ್ಟು ಅಂಬರೀಶ್ ಕೇಂದ್ರ ಹಾಗೂ ರಾಜ್ಯದ ಮಂತ್ರಿಯಾಗಿದ್ದರು. ಕಾಂಗ್ರೆಸ್ ಕಾರ್ಯಕರ್ತರಿಂದ ಸಹಾಯ ಆಗಿಲ್ಲ ಅಂತ ಸಿಲ್ವರ್ ಜ್ಯೂಬಲಿ ಪಾರ್ಕ್ ನಲ್ಲಿ ನಿಂತು ಹೇಳಲಿ. ನಾನು ಅಭಿನಂದನೆ ಸಲ್ಲಿಸುತ್ತೇನೆ ಸಚಿವ ಚಲುವರಾಯಸ್ವಾಮಿ ಹೇಳಿದರು.
ಸ್ವತಂತ್ರರಾಗಿ ನಿಂತಾಗ ಏಂಟು ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಹಕಾರ ಆಗಿಲ್ಲ ಅಂದ್ರೆ ಅಭಿನಂದನೆ ಹೇಳ್ತೇನೆ.
ಕಾಂಗ್ರೆಸ್ ಗೆ ಬೆಲೆ ಸಿಕ್ಕಿದೆ, ಇಲ್ಲ ಅನ್ನೋದಕ್ಕೆ. ಅವರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಯಾವತ್ತು ಹೇಳಿಲ್ಲ, ಚರ್ಚೆ ಕೂಡ ಆಗಿಲ್ಲ.
ಅವರ ತೀರ್ಮಾನ ಅವರಿಗೆ ಬಿಟ್ಟಿದ್ದು ಬಿಜೆಪಿ ಸೇರಿದಂತೆ ದೇವರು ಒಳ್ಳೆಯದು ಮಾಡಲಿ. ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ.