ಕೊಡಗು: ಕೊಡಗಿನ ಪೊನ್ನಂಪೇಟೆ ತಾಲೂಕಿನ ಜನತೆ ಹುಲಿಗಳ ಕಾಟ ಮುಂದುವರೆದಿದ್ದು, ಗ್ರಾಮಗಳಲ್ಲಿ ಮತ್ತೆರಡು ಹುಲಿಗಳು ಅಡ್ಡಾಡುತ್ತಿರುವುದು ಪತ್ತೆಯಾಗಿದೆ.
ಬೆಳ್ಳೂರು,ಬಲ್ಯಮುಂಡೂರು ಗ್ರಾಮದಲ್ಲಿ ಎಸ್ 20, ಎಸ್ 4 ನಂಬರಿನ ವ್ಯಾಘ್ರಗಳು ಸಂಚಾರ ನಡೆಸುತ್ತಿವೆ ಎನ್ನಲಾಗಿದೆ.

ಅರಣ್ಯ ಇಲಾಖೆ ಅಳವಡಿಸಿದ ಕ್ಯಾಮರಾದಲ್ಲಿ ‘ಎಸ್ 20’ ನಂಬರಿನ ಹುಲಿ ಸೆರೆಯಾಗಿದೆ.
ಕೊಡಗು ಅರಣ್ಯ ಸಂರಕ್ಷಣಾಧಿಕಾರಿ ನಿರಂಜನ್ ಮೂರ್ತಿ ಈ ಕುರಿತು ಮಾತನಾಡಿ, ಹುಲಿ ಹಿಡಿಯಲು ಅನುಮತಿ ಇದೆ. ಅದಕ್ಕೆ ಶಕ್ತಿಮೀರಿ ಪ್ರಯತ್ನಿಸಲಾಗುತ್ತಿದೆ. ಕಾರ್ಯಾಚರಣೆ ಸಂದರ್ಭ ಹುಲಿ ತಪ್ಪಿಸಿಕೊಳ್ಳುತ್ತಿದೆ. ಅಲ್ಲಲ್ಲಿ ಮತ್ತಷ್ಟು ಕ್ಯಾಮರಾ ಅಳವಡಿಕೆ ಮಾಡಲಾಗುತ್ತಿದೆ. ಸಾರ್ವಜನಿಕರು ಕಂಡರೆ ತಕ್ಷಣ ಮಾಹಿತಿ ನೀಡಿ ಎಂದರು.
