ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ತಾಲೂಕಿನ ದೆಗ್ಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ ಕನಕ ಜಯಂತಿ ಆಚರಣೆ ಮಾಡಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕನಕರ ಭಾವಚಿತ್ರದ ಜೊತೆಗೆ ವಿವಿದ ಸ್ಥಬ್ದ ಚಿತ್ರಗಳನ್ನು ಮೆರವಣಿಗೆ ನಡೆಸಲಾಯಿತು.

ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯರಾದ ದೆಗ್ಗನಹಳ್ಳಿ ಆನಂದ್ ಮಾತನಾಡಿ ಕನ್ನಡ ಸಾಹಿತ್ಯಕ್ಕೆ ಕನಕರ ಕೊಡುಗೆ ಅಪಾರ ಸಮಾಜದ ಓರೆಕೋರೆಗಳನ್ನು ಖಂಡಿಸುತ್ತಾ ಜನರಿಗೆ ಆಪ್ತವಾದ ಆಡುಭಾಷೆಯಲ್ಲಿ ಕೀರ್ತನೆ ಮುಂಡಿಗೆ ಉಗಾಭೋಗಗಳನ್ನು ನುಡಿಯುತ್ತ ಆಡುತ್ತಾ ಕರ್ನಾಟಕ ಸಂಗೀತಾ ಕ್ಷೇತ್ರಕ್ಕೂ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಕಾರಿ ಧುರೀಣರಾದ ಎಸ್. ಸಿದ್ದೇಗೌಡ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶಿವಕುಮಾರ್ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕೇಬಲ್ ಮಹದೇವ್, ಅನೀತಾ, ಶೋಭಾ ರಾಮಕೃಷ್ಣ, ಡಿ.ಜೆ.ಮಹದೇವ್, ಶಿವಣ್ಣ. ಮುಂಖಂಡರುಗಳಾದ ಯಶೋದಮ್ಮ, ಷಣ್ಮುಖ, ಡಿ.ವಿ ಕೃಷ್ಣಮೂರ್ತಿ ಮುಖ್ಯೋಪಾಧ್ಯಾಯರಾದ ದೇವ್ ಕುಮಾರ್, ಶಿಕ್ಷಕರಾದ ಶಿವಣ್ಣ, ಶಾರದಮ್ಮ ಕವಿತಾ, ಅರ್ಪಿತಾ ಮುಂತಾದವರು ಉಪಸ್ಥಿತರಿದ್ದರು.