ಪಿರಿಯಾಪಟ್ಟಣ: ಒಂದು ಚಿತ್ರ ಸಾವಿರ ಶಬ್ದಗಳಿಗೆ ಸಮಾನ. ವ್ಯಕ್ತಿ ಹಾಗೂ ಯಾವುದೇ ವರ್ಣಿಸಲಾಗದದೃಶ್ಯವನ್ನು ನೈಜವಾಗಿ ಸೆರಹಿಡಿಯುವ ಕಲೆ ಸಾಮಾನ್ಯವಾದುದಲ್ಲ. ಇದರಿಂದ ಆ ಸಂದರ್ಭಖುದ್ದಾಗಿ ವೀಕ್ಷಿಸಿದ ಅನುಭವ ಉಂಟಾಗುವಂತೆ ಮಾಡಿ, ಅಲ್ಲಿನಸ್ಥಿತಿ-ಗತಿಯ ನೈಜಚಿತ್ರಣನೀಡುವಕೆಲಸ ಮಾಡುವಛಾಯಾಗ್ರಾಹಕರಕೊಡುಗೆಸಮಾಜಕ್ಕೆತುಂಬಾಅನನ್ಯವಾಗಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಎಂ.ಎಂ.ರಾಜೇಗೌಡ ತಿಳಿಸಿದರು.
ಪಟ್ಟಣದ ರೋಟರಿ ಭವನದಲ್ಲಿ ಆಯೋಜಿಸಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಯಾಮರಾ ಮಾನವನ ಕಣ್ಣುಗಳಿಂದ್ದಂತೆ. ಕೆಲವು ಸಲ ನಾವೂ ನೋಡಿದ್ದು ನೆನಪಿಗೆ ಬರದಿದ್ದರೂ, ಕ್ಯಾಮಾರಾವು ಶಾಶ್ವತದಾಖಲೆಯನ್ನುಒದಗಿಸುತ್ತದೆ. ಪ್ರಸ್ತುತವಾಗಿ ಮೋಬೈಲ್ ಯುಗದಲ್ಲಿ ಛಾಯಾಗ್ರಾಹಕರು ತೀರ್ವ ಸ್ಪರ್ಧೆಯನ್ನು ಎದುರಿಸಿ ಕಾರ್ಯ ನಿರ್ವಹಿಸಬೇಕಾಗಿರುವುದು ಒಂದು ಸವಾಲಿನ ಕಾರ್ಯವಾಗಿದೆ. ಛಾಯಾಗ್ರಾಹಕರಿಗೆ ಸರ್ಕಾರದಿಂದ ಸೌಲಭ್ಯಗಳು ದೊರೆಯಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕ ಶಂಕರ್, ಮೋಹನ್ ಕುಮಾರ್, ಮಹಾದೇವ್ ತಮ್ಮ ವೃತ್ತಿ ಜೀವನದ ಮಾಹಿತಿಯನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆ ಕಾರ್ಯದರ್ಶಿ ಐಕೆಪಿ ಹೆಗಡೆ, ಜಂಟಿ ಕಾರ್ಯದರ್ಶಿ ರಾಜು, ಪದಾಧಿಕಾರಿಗಳಾದ ಬಿ.ವಿ.ರಾಜೇಗೌಡ, ಸತ್ಯನಾರಾಯಣ, ವಿನಯ್ ಶೇಖರ್, ತಿರುಮಲಾಪುರ ರಾಜೇಗೌಡ, ಹರೀಶ್ ಗೌಡ, ಬಸವೇಗೌಡ ಛಾಯಾಗ್ರಹಕರಾದ ವಿಶ್ವ ಕುಮಾರ್ ಗುಡ್ಡೆಮನೆ, ವಿನಯ್ ಕುಮಾರ್, ಲೋಕೇಶ್, ಲವಕುಮಾರ್, ನಾಗೇಶ್, ಆವರ್ತಿ ಮಹದೇವಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು