ಹುಣಸೂರು: ಸರಿಯಾದ ಜೀವನ ಶೈಲಿಯಿಂದ ಮಧುಮೇಹವನ್ನು ಹತೋಟಿಗೆ ತರಬಹುದು ಎಂದು ಡಾ.ಪವನ್ ಕುಮಾರ್ ತಿಳಿಸಿದರು.
ನಗರದ ಅಪೋಲೋ ಆಸ್ಪತ್ರೆಯಲ್ಲಿ ಹುಣಸೂರು ರೋಟರಿ ಮತ್ತು ಹುಣಸೂರು ಅಪೋಲೋ ಆಸ್ಪತ್ರೆ ಆಶ್ರಯದಲ್ಲಿ ಮಧುಮೇಹ ವಿಶ್ವದಿನ ಅಂಗವಾಗಿ. ಉಚಿತ ಶಿಬಿರದಲ್ಲಿ ಮಾತನಾಡಿದ ಅವರು, ಮಧುಮೇಹ ನಮ್ಮನ್ನ ಆವರಿಸುವ ಮುನ್ನ ಆಹಾರ ಸಮತೋಲನ ಕಾಪಾಡಿಕೊಂಡರೆ ಆರೋಗ್ಯವಂತರಾಗಿ ಜೀವಿಸಬಹುದು ಎಂದರು.
ಹಿಂದೆ ನಾವು ತಿನ್ನುವ ಆಹಾರ ಸಾವಯವದಿಂದ ಕೂಡಿತ್ತು ಈಗ ನಾವು ಸೇವಿಸುವ ಬಹುತೇಕ ಆಹಾರದಲ್ಲಿ ಅರ್ಗನಿಕ್ ಇರುತ್ತಿತ್ತು ಇಂದು ಜಿಂಕ್ ಫುಡ್ಮಯದಿಂದ ಮನುಷ್ಯ ಅನಾರೋಗ್ಯಕ್ಜೆಬತುತ್ತಾಗುತ್ತಿದ್ದಾನೆ. ಆದರಿಂದ ಪ್ರತಿನಿತ್ಯ ನಿಯಮಿತ ನಡಿಗೆ, ವ್ಯಾಯಾಮದಿಂದ ಉತ್ತಮ ಆರೋಗ್ಯ ಪಡೆಯಬಹುದಾಗಿದೆ ಎಂದರು.
ರೋಟರಿ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಮಾತನಾಡಿ, ಮನುಷ್ಯನಿಗೆ ಹಣಕಿಂತ ಆರೋಗ್ಯ ಮುಖ್ಯವಾಗಿದ್ದು, ಅಂತಹ ಅಳಿಲು ಸೇವೆಯನ್ನು ನಿರಂತರ ರೋಟರಿ ಕ್ಲಬ್ ಮಾಡುತ್ತಾ ಬರುತ್ತಿದ್ದು. ಉಚಿತವಾಗಿ ಸಿಗುತ್ತಿದ್ದು, ಅದರ ಸದ್ಬಳಕೆಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಹುಣಸೂರು ಅಪೋಲೋ ಆಸ್ಪತ್ರೆಯ ವ್ಯವಸ್ಥಾಪಕ ಕೇಶವ ಮೂರ್ತಿ ಬಿ. ಹಿರಿಯ ಶುಶ್ರೂಷಕರು ಕೆ.ಮಂಜು, ಶುಶೂಷಕಿ ಸುಮಾ ಇದ್ದರು.



