Sunday, April 13, 2025
Google search engine

Homeಅಪರಾಧಸೋನಿಯಾ, ರಾಹುಲ್‌ ಕುರಿತು ವಿವಾದಾತ್ಮಕ ಪೋಸ್ಟ್‌: ಪತ್ರಕರ್ತ ಸೇರಿ ಇಬ್ಬರ ಮೇಲೆ ಎಫ್ಐಆರ್‌ ದಾಖಲು

ಸೋನಿಯಾ, ರಾಹುಲ್‌ ಕುರಿತು ವಿವಾದಾತ್ಮಕ ಪೋಸ್ಟ್‌: ಪತ್ರಕರ್ತ ಸೇರಿ ಇಬ್ಬರ ಮೇಲೆ ಎಫ್ಐಆರ್‌ ದಾಖಲು

ಬೆಂಗಳೂರು: ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಕುರಿತು ವಿವಾದಾತ್ಮಕ ಪೋಸ್ಟ್‌ ಹಾಕಿದ ಆರೋಪದಡಿ ಬಾಂಗ್ಲಾದೇಶ ಮೂಲದ ವ್ಯಕ್ತಿ ಸೇರಿ ಇಬ್ಬರ ವಿರುದ್ಧ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

ಕೆಪಿಸಿಸಿ ಕಾನೂನು ಘಟಕದ ವಕೀಲ ಜಿ.ಶ್ರೀನಿವಾಸ್‌ ಎಂಬುವರು ನೀಡಿದ ದೂರಿನ ಮೇರೆಗೆ ಬಾಂಗ್ಲಾದೇಶದ ಮೂಲದ ಪರ್ತಕರ್ತ ಎನ್ನಲಾದ ಸಲಾವುದ್ದೀನ್‌ ಶೋಯೇಬ್‌ ಚೌಧರಿ ಮತ್ತು ಅದಿತಿ ಘೋಷ್‌ ಎಂಬುವರ ವಿರುದ್ಧ ಹೈಗ್ರೌಂಡ್ಸ್‌ ಠಾಣೆ ಪೊಲೀಸರು, ಕೋಮುದ್ವೇಷ ಬಿತ್ತುವುದು, ಅಪಪ್ರಚಾರ, ಧರ್ಮಗಳ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ ಆರೋಪದಡಿ ಎಫ್ಐಆರ್‌ ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?:

ಬಾಂಗ್ಲಾದೇಶ ಮೂಲದ ಸಲಾವುದ್ದೀನ್‌ ಶೋಯೇಬ್‌ ಚೌಧರಿ ಎಂಬಾತ “ಸೋನಿಯಾ ಗಾಂಧಿ ಅಂತರ್‌ ಧರ್ಮದ ಮದುವೆಯಾಗಿ ಭಾರತದ ಪೌರತ್ವ ಹೊಂದಿದ್ದಾರೆ. ಆದರೂ ಅವರು ಕ್ರಿಶ್ಚಿಯನ್‌ ಧರ್ಮ ಪಾಲಿಸುತ್ತಿದ್ದಾರೆ. ಅಲ್ಲದೆ, ಸೋನಿಯಾ ಪಾಕಿಸ್ತಾನದ ಐಎಸ್‌ಐ ಏಜೆಂಟ್‌’ ಬರೆದುಕೊಂಡಿದ್ದ. ಜೊತೆಗೆ ರಾಹುಲ್‌ ಗಾಂಧಿ ಗೌರವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಟ್ವೀಟ್‌ ಮಾಡಿದ್ದ. ಈ ಟ್ವೀಟ್‌ ಅನ್ನು ಅದಿತಿ ಘೋಷ್‌ ಎಂಬುವರು “ದಿ ಜೈಪುರ್‌ ಡೈಲಾಗ್ಸ್‌’ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನರಿಗೆ ತಲುಪುವ ರೀತಿಯಲ್ಲಿ ಪ್ರಚಾರ ಮಾಡಿದ್ದರು.

RELATED ARTICLES
- Advertisment -
Google search engine

Most Popular