Friday, February 27, 2026
Google search engine

Homeಅಪರಾಧಜಾತಿನಿಂದನೆ ಪ್ರಕರಣದಲ್ಲಿ ಶಿಕ್ಷೆ ಪ್ರಕಟ

ಜಾತಿನಿಂದನೆ ಪ್ರಕರಣದಲ್ಲಿ ಶಿಕ್ಷೆ ಪ್ರಕಟ

ಜಾತಿನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ವೇಣೂರು ಪೊಲೀಸ್‌ ಠಾಣಾ ಅ.ಕ್ರ 15/2021, ಕಲಂ-452,354(a),506 IPC ಮತ್ತು:ಕಲಂ;3(1)(w)(i),3(2)(Va) SC/ST Act ನೇ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖಾಧಿಕಾರಿಗಳಾಗಿದ್ದ ಬಂಟ್ವಾಳ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕ ವ್ಯಾಲೆಂಟೈನ್ ಡಿಸೋಜಾರು ಪ್ರಕರಣದ ತನಿಖೆ ನಡೆಸಿ, ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ದೋಷಾರೋಪಣಾ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರಲ್ಲಿ ಪ್ರಕರಣದ ವಿಚಾರಣೆ ನಡೆದು ನ್ಯಾಯಾಧೀಶರಾದ ಜಗದೀಶ್‌ ವಿ ಎನ್‌ ರವರು ಪ್ರಕರಣದ ಆರೋಪಿ ಖಾಲಿದ್ @ಅಬ್ದುಲ್ ಖಾದರ್ ಎಂಬಾತನಿಗೆ ದಿನಾಂಕ 26-02-2026 ರಂದು ಕಲಂ-354-A of IPC and u/s. 3 (1) (w) (i) of SC/ST Act, 1989 ಕಾಯಿದೆಗೆ ಸಂಬಂಧಿಸಿದಂತೆ 1 ವರ್ಷ ಕಾರಾಗೃಹ ಹಾಗೂ 10,000 ರೂ ದಂಢ ವಿಧಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಜ್ಯೋತಿ ನಾಯ್ಕ್‌ ರವರು ಸಮರ್ಥವಾಗಿ ವಾದ ಮಂಡನೆ ಮಾಡಿದರು.

RELATED ARTICLES
- Advertisment -
Google search engine

Most Popular