ಪಿರಿಯಾಪಟ್ಟಣ: ಷೇರುದಾರ ಸದಸ್ಯರು ಹಾಗೂ ಆಡಳಿತ ಮಂಡಳಿ ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಸಹಕಾರಿ ಸಂಘ ಪ್ರತಿ ವರ್ಷ ಲಾಭಾಂಶದಲ್ಲಿ ಸಾಗಲು ಸಹಕಾರಿಯಾಗುತ್ತಿದೆ ಎಂದು ಕಲ್ಪವೃಕ್ಷ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಪ್ರಶಾಂತ್ ಗೌಡ ತಿಳಿಸಿದರು.
ಪಟ್ಟಣದಲ್ಲಿ ನಡೆದ ಸಂಸ್ಥೆಯ 12ನೇ ವರ್ಷದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆ ಪ್ರಾರಂಭವಾದಾಗಿನಿಂದ ಷೇರುದಾರ ಸದಸ್ಯರ ಹಿತ ಕಾಯುವ ಜೊತೆಗೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿದ್ದರ ಫಲವಾಗಿ ಆರ್ಥಿಕವಾಗಿ ಸಬಲವಾಗುತ್ತಿದೆ.
ಯಾವುದೇ ಒಂದು ಸಹಕಾರಿ ಸಂಸ್ಥೆ ಅಭಿವೃದ್ಧಿ ಹೊಂದಲು ಸದಸ್ಯರು ಹಾಗೂ ಸಂಸ್ಥೆಯ ಪಾಲುದಾರರ ಸಹಕಾರ ಮುಖ್ಯ ಕಾರಣವಾಗಿದೆ. ಸಹಕಾರ ಸಂಸ್ಥೆಗೆ ಠೇವಣಿ ಹಾಗೂ ಪಿಗ್ಮಿ ಠೇವಣಿ ಆರ್ಥಿಕ ಸ್ತಂಭವಾಗಿದ್ದು ಕಳೆದೆರಡು ಸಾಲಿನಲ್ಲಿ ಕೋವಿಡ್ ಮಹಾಮಾರಿಯಿಂದ ಸಂಸ್ಥೆ ಸಾಲ ವಸುಲಾತಿಯಲ್ಲಿ ಸ್ವಲ್ಪ ಹಿಂದೆ ಬಿದ್ದಿದ್ದು ಅನೇಕ ಪ್ರಕರಣಗಳು ಈಗಾಗಲೇ ಕೋರ್ಟಿನ ಮೆಟ್ಟಿಲೇರಿವೆ.
ಸಂಘದ ಸ್ವಂತ ಕಟ್ಟಡ ಪ್ರಾರಂಭವಾಗಿದ್ದು ಮರಣ ನಿಧಿ ಯೋಜನೆಯಲ್ಲಿ 10 ಸಾವಿರ ರೂ ನೀಡಬೇಕೆಂಬ ಸದಸ್ಯರ ಬೇಡಿಕೆಯನ್ನು ಆಡಳಿತ ಮಂಡಳಿ ಅನುಮೋದನೆ ಪಡೆದು ತೀರ್ಮಾನಿಸುವುದಾಗಿ ತಿಳಿಸಿ ಸಹಕಾರಿ ಕ್ಷೇತ್ರಗಳಲ್ಲಿ ಸೇವಾ ಮನೋಭಾವನೆ ಮಾಡುವಾಗ ಕೆಲವೊಂದು ಲೋಪದೋಷಗಳಾಗುವುದು ಸಹಜ, ಸಂಸ್ಥೆ ವತಿಯಿಂದ ಮುಂದಿನ ದಿನಗಳಲ್ಲಿ ಸಾವಯವ ಕೃಷಿಗೆ ಪ್ರೇರಣೆಯಾಗುವ ಯೋಜನೆಗಳನ್ನು ರೂಪಿಸುವ ಆಲೋಚನೆ ಇದೆ ಎಂದರು.
ಈ ವೇಳೆ ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಉತ್ತಮ ವ್ಯವಹಾರ ನಡೆಸಿದ ಗ್ರಾಹಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಕೆ.ಎಸ್ ಕೃಷ್ಣೇಗೌಡ, ನಿರ್ದೇಶಕರಾದ ಬಿ.ಎ ಪ್ರಕಾಶ್, ಸಿ.ಆರ್ ದೇವರಾಜ್, ಎಸ್.ಆರ್ ದಿನೇಶ್, ಕೆ.ಎಲ್ ಸುರೇಶ್, ಡಿ.ಆರ್ ಶಾಬಾಜ್, ಎ.ಪಿ ದಿನೇಶ್ ಕುಮಾರ್, ಕೆ.ಎನ್ ನಟೇಶ್, ಶೃತಿ ಮಂಜುನಾಥ್, ಬಿ.ಪಿ ರಾಜೇಶ್, ಕೆ.ಆರ್ ಕೆಂಪಣ್ಣ, ಕೆ.ಎಚ್ ವಿಜಯ್ ಕುಮಾರ್, ಮಹೇಶ್ವರಿ, ಹರೀಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಸಿಬ್ಬಂದಿ ಚಿತ್ರ, ಆಶಾ, ಮಹದೇವ್, ಮನು, ಮಹೇಂದ್ರ, ಪ್ರಿಯದರ್ಶಿನಿ, ಕುಮಾರಿ ಹಾಗು ಸದಸ್ಯರುಗಳು ಇದ್ದರು.
