Tuesday, April 22, 2025
Google search engine

Homeರಾಜ್ಯರಾಹುಲ್ ಗಾಂಧಿ ತೋರಿಸಿರುವ ಸಂವಿಧಾನದ ಪ್ರತಿ ನಕಲಿ : ಅಮಿತ್ ಶಾ ಆರೋಪ

ರಾಹುಲ್ ಗಾಂಧಿ ತೋರಿಸಿರುವ ಸಂವಿಧಾನದ ಪ್ರತಿ ನಕಲಿ : ಅಮಿತ್ ಶಾ ಆರೋಪ

ರಾಂಚಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂವಿಧಾನದ ನಕಲಿ ಪ್ರತಿಯನ್ನ ತೋರಿಸುವ ಮೂಲಕ ಸಂವಿಧಾನವನ್ನು ಅವಮಾನಿಸಿದ್ದಾರೆ ಮತ್ತು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಆರೋಪಿಸಿದ್ದಾರೆ.

ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ಜಾರಿಗೆ ತರಲು ಬಿಜೆಪಿ ಎಂದಿಗೂ ಕಾಂಗ್ರೆಸ್ಗೆ ಅವಕಾಶ ನೀಡುವುದಿಲ್ಲ ಎಂದು ಶಾ ಹೇಳಿದ್ದಾರೆ.

“ರಾಹುಲ್ ಗಾಂಧಿ ಸಂವಿಧಾನದ ಪ್ರತಿಯನ್ನ ತೋರಿಸುತ್ತಾರೆ. ಎರಡು ದಿನಗಳ ಹಿಂದೆ ಅದು ಬಹಿರಂಗವಾಗಿದೆ. ಅವರು ತೋರಿಸಿದ ಸಂವಿಧಾನದ ಪ್ರತಿ ಸಿಕ್ಕಿದ್ದು, ಆ ಪ್ರತಿಯ ಮುಖಪುಟದ ಮೇಲೆ ಭಾರತದ ಸಂವಿಧಾನ ಎಂದು ಬರೆಯಲಾಗಿದೆ. ಆದ್ರೆ, ಅದ್ರಲ್ಲಿ ಯಾವುದೇ ವಿಷಯವಿಲ್ಲದೆ ಶೂನ್ಯವಾಗಿದೆ.

ಸಂವಿಧಾನವನ್ನು ಅಪಹಾಸ್ಯ ಮಾಡಬೇಡಿ. ಇದು ನಂಬಿಕೆ ಮತ್ತು ವಿಶ್ವಾಸದ ಪ್ರಶ್ನೆ. ಸಂವಿಧಾನದ ನಕಲಿ ಪ್ರತಿಯನ್ನ ತೋರಿಸುವ ಮೂಲಕ ನೀವು ಬಿ.ಆರ್ ಅಂಬೇಡ್ಕರ್ ಮತ್ತು ಸಂವಿಧಾನ ರಚನಾ ಸಭೆಯನ್ನ ಅವಮಾನಿಸಿದ್ದೀರಿ. ಕಾಂಗ್ರೆಸ್ ಪಕ್ಷವು ಸಂವಿಧಾನವನ್ನ ಅಪಹಾಸ್ಯ ಮಾಡಿದೆ” ಎಂದು ಪಲಮುದಲ್ಲಿ ನಡೆದ ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 26ನ್ನ ಸಂವಿಧಾನ ದಿನವನ್ನಾಗಿ ಆಚರಿಸಲು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು. ಒಬಿಸಿಗಳು, ಬುಡಕಟ್ಟು ಜನಾಂಗದವರು ಮತ್ತು ದಲಿತರಿಂದ ಮೀಸಲಾತಿಯನ್ನ ಕಸಿದುಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಮತ್ತು ಅದನ್ನು ಅಲ್ಪಸಂಖ್ಯಾತರಿಗೆ ನೀಡಲು ಯೋಜಿಸಿದೆ ಎಂದು ಶಾ ಆರೋಪಿಸಿದರು.

“ಕಾಂಗ್ರೆಸ್ ಒಬಿಸಿ ಕೋಟಾವನ್ನ ವಿರೋಧಿಸುತ್ತದೆ, ಉಲೇಮಾಗಳ ನಿಯೋಗವು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನಾಯಕರನ್ನ ಭೇಟಿಯಾದಾಗ ಅಲ್ಪಸಂಖ್ಯಾತರಿಗೆ ಶೇಕಡಾ 10ರಷ್ಟು ಮೀಸಲಾತಿ ನೀಡುವ ಭರವಸೆ ನೀಡಿತು. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ಬಿಜೆಪಿ ಎಂದಿಗೂ ಧರ್ಮ ಆಧಾರಿತ ಮೀಸಲಾತಿಯನ್ನ ಅನುಮತಿಸುವುದಿಲ್ಲ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular