ಮೈಸೂರು: ಮೈಸೂರು ಮಹಾನಗರಪಾಲಿಕೆ ಚುನಾವಣೆ ಮುಂದುಡುವ ಪ್ರಶ್ನೆಯೇ ಇಲ್ಲ.ಶೀಘ್ರದಲ್ಲೇ ಚುನಾವಣೆ ನಡೆಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದರು.
ನಗರದ ಸರ್ಕಾರಿ ಅತಿಥಿಗೃಹದ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಿಎಂ ಅವರು ಮಹಾನಗರ ಪಾಲಿಕೆ ಚುನಾವಣೆ ಸಮಯಕ್ಕೆ ಸರಿಯಾಗಿ ನಡೆಸುವಂತೆ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಅವಧಿ ಮುಗಿದ ಬಳಿಕವೇ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆ ಮುಂದಿನ ಎಪ್ರಿಲ್, ಮೇಗೆ ಇದ್ದು ಹದಿನೈದು ದಿನಗಳಲ್ಲಿ ಪಾಲಿಕೆ ಚುನಾವಣೆ ನಡೆಸಲಾಗುವುದು ಎಂದು ಹೇಳಿದರು. ೨ ಸಾವಿರ ಕೋಟಿ ರೂ. ವೆಚ್ಚದಲ್ಲಿ ಪೆರಿಪರಲ್ ರಿಂಗ್ ರಸ್ತೆ ಬಗ್ಗೆ ಈಗಾಗಲೇ ಡಿಪಿಆರ್‌ಗೆ ಟೆಂಡರ್ ಕರೆಯಲಾಗಿದೆ. ಅದಾದ ಬಳಿಕ ಭೂಮಿ ಖರೀದಿ ಸೇರಿ ನಾನಾ ಪ್ರಕ್ರಿಯೆಗಳು ಆಗಬೇಕಿದೆ. ಶೀಘ್ರದಲ್ಲೇ ಅವುಗಳೆಕ್ಕೂ ಚಾಲನೆ ಮಾಡಿ ಮುಗಿಸಲಾಗುವುದು ಎಂದರು.
ಮಣಿಪಾಲ್ ಆಸ್ಪತ್ರೆ ಸೇರಿ ಹಲವೆಡೆ ಬೆಂಗಳೂರು ಮಾದರಿ ಫ್ಲೆ ಓವರ್ ನಿರ್ಮಾಣದ ಸ್ಥಳ ವೀಕ್ಷಿಸಲಾಗಿದೆ. ಅವುಗಳಿಗೂ ಶೀಘ್ರ ಡಿಪಿಆರ್ ತಯಾರಿಸಿ ಚಾಲನೆ ಕೊಡುವ ಕೆಲಸ ಮಾಡುತ್ತೇವೆ ಎಂದರು. ಸಿಎಂ ಡಿಸಿಎಂ ಹಣ ವಸೂಲಿ ಮಾಡುತ್ತಿದ್ದಾರೆಂಬ ಪ್ರಧಾನಿ ಹೇಳಿಕೆಗೆ ಪ್ರತಿ ಕ್ರಯಿಸಿ ಅವರ ಹೇಳಿಕೆಗೆ ಪ್ರತಿಕ್ರಯಿಸುವಷ್ಟು ದೊಡ್ಡವನು ನಾನಲ್ಲ. ಆದರೂರು ಭ್ರಷ್ಟಾಚಾರ ದ ಪಿತಾಮಹ ಬಿಜೆಪಿಯವರು ಎಂಬುದು ಜನರ ಅನಿಸಿಕೆ ಆಗಿದೆ ಎಂದರು.