Sunday, April 20, 2025
Google search engine

Homeಅಪರಾಧಭ್ರಷ್ಟಾಚಾರ ಪ್ರಕರಣ : ಇಮ್ರಾನ್‌ಖಾನ್‌ಗೆ ಜೈಲುಶಿಕ್ಷೆ ಅಮಾನತು

ಭ್ರಷ್ಟಾಚಾರ ಪ್ರಕರಣ : ಇಮ್ರಾನ್‌ಖಾನ್‌ಗೆ ಜೈಲುಶಿಕ್ಷೆ ಅಮಾನತು

ಇಸ್ಲಾಮಾಬಾದ್ : ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್‌ಖಾನ್ ಹಾಗೂ ಅವರ ಪತ್ನಿ ಬುಷ್ರಾ ಬೀಬಿಗೆ ವಿಧಿಸಲಾಗಿದ್ದ ೧೪ ವರ್ಷ ಜೈಲು ಶಿಕ್ಷೆಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಅಮಾನತುಗೊಳಿಸಿದೆ ಎಂದು ವರದಿಯಾಗಿದೆ.

ಸರಕಾರದ ಪ್ರತಿನಿಧಿಯಾಗಿ ಪಡೆದಿದ್ದ ಉಡುಗೊರೆಗಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡಿದ ಪ್ರಕರಣದಲ್ಲಿ ಇಮ್ರಾನ್ ಮತ್ತು ಅವರ ಪತ್ನಿಗೆ ಸಾರ್ವತ್ರಿಕ ಚುನಾವಣೆಗೆ ಕೆಲ ದಿನಗಳ ಮೊದಲು ವಿಶೇಷ ನ್ಯಾಯಾಲಯ ೧೪ ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಇಮ್ರಾನ್ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಿದರೂ, ಇತರ ಹಲವು ಪ್ರಕರಣಗಳಲ್ಲಿ ಜೈಲುಶಿಕ್ಷೆಗೆ ಗುರಿಯಾಗಿರುವುದರಿಂದ ಇಮ್ರಾನ್‌ಗೆ ಜೈಲಿನಿಂದ ಬಿಡುಗಡೆಯ ಭಾಗ್ಯ ದೊರಕುವುದಿಲ್ಲ.

RELATED ARTICLES
- Advertisment -
Google search engine

Most Popular