Thursday, July 17, 2025
Google search engine

Homeರಾಜ್ಯಸ್ಮಾರ್ಟ್ ವಿದ್ಯುತ್ ಮೀಟರ್ ವಿಚಾರದಲ್ಲಿ ಭ್ರಷ್ಟಾಚಾರ? ಸಚಿವ ಕೆಜೆ ಜಾರ್ಜ್​ಗೆ ಸಂಕಷ್ಟ , ಬಿಜೆಪಿ ಹೊಸ...

ಸ್ಮಾರ್ಟ್ ವಿದ್ಯುತ್ ಮೀಟರ್ ವಿಚಾರದಲ್ಲಿ ಭ್ರಷ್ಟಾಚಾರ? ಸಚಿವ ಕೆಜೆ ಜಾರ್ಜ್​ಗೆ ಸಂಕಷ್ಟ , ಬಿಜೆಪಿ ಹೊಸ ಸಮರಕ್ಕೆ ಸಜ್ಜು

ಬೆಂಗಳೂರು: ಸ್ಮಾರ್ಟ್ ವಿದ್ಯುತ್ ಮೀಟರ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಬಿಜೆಪಿ ಇಂಧನ ಇಲಾಖೆ ವಿರುದ್ಧ ಕಾನೂನು ಹೋರಾಟ ಆರಂಭಿಸಿದೆ. ಈ ಹಿಂದೆ ಲೋಕಾಯುಕ್ತ ಡಿವೈಎಸ್‌ಪಿಗೆ ದೂರು ನೀಡಿದ್ದರೂ ಕ್ರಮವಿಲ್ಲವೆಂದು ಬೇಸತ್ತು, ಬಿಜೆಪಿ ಶಾಸಕರು ಈಗ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದಾರೆ.

ಬಿಜೆಪಿ ನಾಯಕರು—ಸಿ.ಎನ್. ಅಶ್ವತ್ಥನಾರಾಯಣ್, ಎಸ್‌.ಆರ್. ವಿಶ್ವನಾಥ್ ಹಾಗೂ ಧೀರಜ್ ಮುನಿರಾಜು—ಕೊಟ್ಟಿರುವ ದೂರಿನಲ್ಲಿ, ದಾವಣಗೆರೆಯ ರಾಜಶ್ರೀ ಎಲೆಕ್ಟ್ರಿಕಲ್ಸ್ಗೆ ಸ್ಮಾರ್ಟ್ ಮೀಟರ್ ಗುತ್ತಿಗೆ ನೀಡುವಲ್ಲಿ ಅಕ್ರಮವಾಗಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಇತರೆ ಕಂಪೆನಿಗಳನ್ನು ಟೆಂಡರ್‌ನಲ್ಲಿ ಹೊರಗಿಟ್ಟಿದ್ದು, ಗ್ರಾಹಕರಿಗೆ 900 ರೂ. ಮೀಟರ್‌ನ್ನು 5,000ರಿಂದ 8,800 ರೂ.ಗೆ ನೀಡಲಾಗುತ್ತಿದೆ ಎಂಬುದು ದೂರಿನ ಅರ್ಥ.

ದೂರುದಾರರ ಪರ ವಕೀಲ ಲಕ್ಷ್ಮಿ ಅಯ್ಯಂಗಾರ್ ವಾದ ಮಂಡಿಸಿದ್ದು, ಈ ಗುತ್ತಿಗೆ 10 ಸಾವಿರ ಕೋಟಿ ರೂ. ಮೊತ್ತದಂತಹದಾಗಿದ್ದರೂ ಕೇವಲ 354 ಕೋಟಿ ವ್ಯವಹಾರ ನಡೆಸುವ ಕಂಪೆನಿಗೆ ನೀಡಲಾಗಿದೆ ಎನ್ನಲಾಗಿದೆ. ಟೆಂಡರ್ ಬೆಸ್ಕಾಂ ವ್ಯಾಪ್ತಿಯದ್ದಾಗಿದ್ದರೂ ಇತರೆ ಎಸ್ಕಾಂಗಳಿಗೆ ಹರಡಲಾಗಿದೆ ಎಂಬುದು ಕಾನೂನುಬಾಹಿರ ಎನ್ನುತ್ತಿದ್ದಾರೆ.

ಇಂಧನ ಸಚಿವ ಕೆ.ಜೆ. ಜಾರ್ಜ್, ಬೆಸ್ಕಾಂ ಅಧ್ಯಕ್ಷರು ಹಾಗೂ ಇತರ ಅಧಿಕಾರಿಗಳ ವಿರುದ್ಧ ತನಿಖೆ ನಡೆಯಬೇಕು ಎಂದು ಬಿಜೆಪಿ ರಾಜ್ಯಪಾಲರಿಗೂ ಮನವಿ ಸಲ್ಲಿಸಿದ್ದು, ಕೋರ್ಟ್ ಈ ದೂರನ್ನು ವಿಚಾರಣೆಗೆ ಅಂಗೀಕರಿಸುವ ನಿರೀಕ್ಷೆಯಿದೆ. ಇಂದು ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ವಿಚಾರಣೆ ನಡೆಸಲಿದ್ದಾರೆ.

RELATED ARTICLES
- Advertisment -
Google search engine

Most Popular