Saturday, April 19, 2025
Google search engine

Homeಅಪರಾಧಖೋಟಾ ನೋಟು ಪ್ರಕರಣ: ಕಳೆದ 20 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

ಖೋಟಾ ನೋಟು ಪ್ರಕರಣ: ಕಳೆದ 20 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

ಮಂಗಳೂರು(ದಕ್ಷಿಣ ಕನ್ನಡ): ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿ ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇಬ್ರಾಹೀಂ ಬಂಧಿತ ವ್ಯಕ್ತಿ.

2004ರಲ್ಲಿ ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪೈಕಿ ಓರ್ವ ಆರೋಪಿ ಶರಣಾಗತನಾಗಿದ್ದರೆ, ಇನ್ನೋರ್ವ ಆರೋಪಿ ಇಬ್ರಾಹೀಂ ತಲೆಮರೆಸಿಕೊಂಡಿದ್ದ.

ಇದೀಗ ನಗರ ಠಾಣಾ ಪೊಲೀಸರು ಆರೋಪಿಯನ್ನು ನೆಲ್ಯಾಡಿಯಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

RELATED ARTICLES
- Advertisment -
Google search engine

Most Popular