Friday, August 22, 2025
Google search engine

Homeರಾಜಕೀಯದೇಶ ಮೊದಲು, ರಾಜಕೀಯ ಅಮೇಲೆ: ಸಂಸದೆ ಸುಮಲತಾ ಅಂಬರೀಶ್

ದೇಶ ಮೊದಲು, ರಾಜಕೀಯ ಅಮೇಲೆ: ಸಂಸದೆ ಸುಮಲತಾ ಅಂಬರೀಶ್

ಮಂಡ್ಯ: ವಿಧಾನಸೌದದಲ್ಲಿ ಪಾಕ್ ಪರ ಘೋಷಣೆ ಆರೋಪಕ್ಕೆ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದು, ಇದು ಅತ್ಯಂತ ಖಂಡನಿಯ. ನಮ್ಮ ದೇಶ ಮೊದಲು.ದ್ವೇಷ ಮತ್ತು ರಾಜಕೀಯ ಅಮೇಲೆ ಎಂದು ಹೇಳಿದ್ದಾರೆ.

ಮಂಡ್ಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನಸೌದವನ್ನು  ಪ್ರಜಾಪ್ರಭುತ್ವದ ದೇವಾಲಯ ಅಂತ ಹೇಳ್ತೇವೆ. ಅಂತಹ ಜಾಗದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅನ್ನೋದು ತಪ್ಪು. ಯಾರೇ ಇರಲಿ ಯಾವುದೇ ಪಕ್ಷದವರಿರಲು ಸಮರ್ಥನೆ ಮಾಡೋದು ಖಂಡನಿಯ ವಿಷಯ. ರಾಜ್ಯ ಸರ್ಕಾರ ತನಿಖೆ ನಡೆಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಜಾತಿ ಗಣತಿ ವರದಿ ವಿಚಾರವಾಗಿ ಮಾತನಾಡಿ, ಒಂದಷ್ಟು ಗೊಂದಲ ಇದೆ, ನಾವು ಒಪ್ಪಲ್ಲ ಅಂತಿದ್ದಾರೆ, ವರದಿ ಬಂದ ಮೇಲೆ ನೋಡಬೇಕು. ಏನಾದ್ರು ಲೋಪದೋಷಗಳು ಇದ್ಯಾ ಅನ್ನೋದು ಗೊತ್ತಾಗುತ್ತೆ ಎಂದರು.

ಬೇಬಿ ಬಿಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ವಿಚಾರ‌ವಾಗಿ ಮಾತನಾಡಿ, ಸಚಿವರಿಗೆ ವಿಧಾನಸೌದದಲ್ಲಿ ಇದ್ದಾರೆ ಇಂದು ಸಭೆ ರದ್ದಾಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ನಿಮಿಷಾಂಬ ದೇಗುಲಕ್ಕೆ ಭೇಟಿ ಕೊಟ್ಟಿದೆ. ಆಶೀರ್ವಾದ ಪಡೆದಿದ್ದೇನೆ ಸಂತೋಷವಾಗಿದೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ನನ್ನ ನಿರ್ಧಾರದ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇನೆ. ಪಕ್ಷ ತೀರ್ಮಾನ ಮಾಡಬೇಕು. ಬೆಂಬಲಿಗರಿಗೆ ಧೈರ್ಯ ತುಂಬುವ ಕೆಲಸ ಮಾಡದ್ದೇವೆ. ಬಿಜೆಪಿಗೆ ಬನ್ನಿ ಅಂತ ಕರೆದಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿ ತಾಲ್ಲೂಕಿಗೆ ತೆರಳಿ  ಸಭೆ ಮಾಡಿ ಮಾತನಾಡುತ್ತಾನೆ. ಹಿಂದೆ ಸ್ವತಂತ್ರ ಅಭ್ಯರ್ಥಿಯಾಗಿದ್ದೆ, ಈಗ ಬೇರೆ ರೀತಿಯಲ್ಲಿ ಭೇಟಿ ಮಾಡ್ತೇನೆ ಎಂದರು.

ನಿರ್ಮಾಲನಂದ ಸ್ವಾಮೀಜಿ ಆಶೀರ್ವಾದ ಪಡೆದು ಪ್ರಚಾರ ಆರಂಭಿಸುತ್ತೇನೆ. ತಾಲ್ಲೂಕು ಪ್ರವಾಸ ಮಾಡ್ತೇನೆ. ಐದು ವರ್ಷಗಳು ನಾನು ಇಂಡಿಪೆಂಡೆಂಟ್. ಈಗ ಪಕ್ಷ ಪಕ್ಷದಿಂದ ಬರುವ ಸೂಚನೆ ಮೇಲೆ ಕೆಲಸ ಮಾಡುತ್ತೇನೆ. ಮಂಡ್ಯ ಎಲೆಕ್ಷನ್ ಸಾಧಾರಣವಾಗಿ ನಡೆಯಲ್ಲ ವಿಶೇಷವಾಗಿ ನಡೆಯುತ್ತೆ. ಲಾಸ್ಟ್ ಟೈಮ್ ಚಾಲೆಂಜಸ್ ಫೇಸ್ ಮಾಡಿದ್ದೇನೆ. ಪಕ್ಷದಲ್ಲಿ ಹಿರಿಯರು ಇದ್ದಾರೆ ನನ್ನ ಗೈಡ್ ಮಾಡ್ತಾರೆ ಅನ್ನೋ ನಂಬಿಕೆ ಇದೆ. ತಾಲ್ಲೂಕಿನ ಬೆಂಬಲಿಗರ ಜೊತೆ ಸಭೆ ಚರ್ಚೆ ಮಾಡ್ತೇನೆ ಎಂದು ಹೇಳಿದರು.

ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಬಳಿ ಪದೆ ಪದೆ ಕೇಳಿದ್ದಾಗ ಆ ರೀತಿ ಹೇಳಿದ್ದಾರೆ ಅಷ್ಟೆ.  ನಾನು ಯಾವತ್ತು ದ್ವೇಷ ದಿಂದ ಟ್ರೀಟ್ ಮಾಡಿಲ್ಲ. ಯಾರನ್ನು ವಯಕ್ತಿಕವಾಗಿವ ಟೀಕೆ, ಟಾರ್ಗೆಟ್ ಮಾಡಿಲ್ಲ. ದ್ವೇಷದ ರಾಜಕಾರಣ ಮಾಡಿಲ್ಲ, ನನ್ನ ರೆಕಾರ್ಡ್ ತೆಗೆದು ನೋಡಿ ನಾನು ಎಲ್ಲು ತಪ್ಪು ಮಾತನಾಡಿಲ್ಲ. ಮೊದಲಿಂದಲೂ ನಾನು ಸಾಫ್ಟ್ ಎಂದರು.

RELATED ARTICLES
- Advertisment -
Google search engine

Most Popular