ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ವಿದೇಶ ಪ್ರವಾಸದ ಅನುಮತಿಯನ್ನು ಬೆಂಗಳೂರು 57ನೇ ಸೆಷನ್ಸ್ ಕೋರ್ಟ್ ನೀಡಿದೆ. ಡೆವಿಲ್ ಚಿತ್ರದ ಚಿತ್ರೀಕರಣಕ್ಕಾಗಿ ಈ ಅನುಮತಿ ಕೇಳಲಾಗಿತ್ತು.
ಈ ಹಿಂದೆ ಇಸ್ರೇಲ್ನಲ್ಲಿ ಚಿತ್ರೀಕರಣ ನಡೆಸಲು ತೀರ್ಮಾನವಾಗಿತ್ತು. ಆದರೆ ಅಲ್ಲಿನ ಯುದ್ಧ ಪರಿಸ್ಥಿತಿಯಿಂದಾಗಿ ಚಿತ್ರತಂಡವು ಇಸ್ರೇಲ್ ಪ್ರಯಾಣವನ್ನು ರದ್ದುಗೊಳಿಸಿ, ಥಾಯ್ಲೆಂಡ್‌ನಲ್ಲಿ ಚಿತ್ರೀಕರಣ ನಡೆಸಲು ನಿರ್ಧರಿಸಿದೆ.
ಮೂಲತಃ ದರ್ಶನ್‌ಗೆ ಜುಲೈ 1ರಿಂದ 25ರ ವರೆಗೆ ಪ್ರವಾಸ ಅನುಮತಿ ದೊರೆತಿತ್ತು. ಆದರೆ, ಚಿತ್ರೀಕರಣ ಸ್ಥಳದಲ್ಲಿ ಬದಲಾವಣೆಯಾಗಿ ದರ್ಶನ್ ಪರ ವಕೀಲ ಎಸ್. ಸುನಿಲ್ ಕುಮಾರ್ ಕೋರ್ಟ್‌ನಲ್ಲಿ ಜುಲೈ 11 ರಿಂದ 30ರ ವರೆಗೆ ಹೊಸ ದಿನಾಂಕಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದರು.
ಕೋರ್ಟ್ ಈ ವಿನಂತಿಯನ್ನು ಸ್ವೀಕರಿಸಿ ಹೊಸ ದಿನಾಂಕದಲ್ಲಿ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಿದೆ. ಹೀಗಾಗಿ ನಟ ದರ್ಶನ್ ಥಾಯ್ಲೆಂಡ್‌ನಲ್ಲಿ ಡೆವಿಲ್ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.