ಇಸ್ಲಾಮಾಬಾದ್: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ೧೨ ಪ್ರಕರಣಗಳಲ್ಲಿ ಜಾಮೀನು ನೀಡಿದ ನ್ಯಾಯಾಲಯ
ಕಳೆದ ವರ್ಷದ ಮೇ ತಿಂಗಳಿನಲ್ಲಿ ಪಾಕಿಸ್ತಾನದ ಮಿಲಿಟರಿ ಸಂಬಂದಿ ಸ್ಥಳಗಳ ಮೇಲಿನ ದಾಳಿಗಳಿಗೆ ಸಂಬಂಧಿಸಿದ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಅವರಿಗೆ ಪಾಕಿಸ್ತಾನದ ಉಗ್ರ-ನಿಗ್ರಹ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.
ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ಅವರ ಪಕ್ಷದಿಂದ ಬೆಂಬಲಿತ ಹೆಚ್ಚಿನ ಸ್ವತಂತ್ರ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಲ್ಲಿಸಿದ ವಿದ್ಯಮಾನದ ನಂತರ ಈ ಬೆಳವಣಿಗೆ ನಡೆದಿದೆ. ಆದರೆ ವಿಳಂಬಿತ ಚುನಾವಣಾ ಫಲಿತಾಂಶಗಳಲ್ಲಿ ನವಾಝ್ ಶರೀಫ್ ಅವರ ಪಕ್ಷ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಪಾಕಿಸ್ತಾನದಲ್ಲಿ ಮೇ ೯ರಂದು ನಡೆದ ಹಿಂಸಾಚಾರದಲ್ಲಿ ದೇಸದ ಹಲವು ಪ್ರಮುಖ ಮಿಲಿಟರಿ ನೆಲೆಗಳು ಹಾನಿಗೀಡಾದ ನಂತರ ಖಾನ್ ಹಾಗೂ ಅವರ ಪಾಕಿಸ್ತಾನ್ ತೆಹರೀಕ್-ಇ-ಇನ್ಸಾಫ್ ಪಕ್ಷದ ಹಲವು ಮುಖಂಡರು ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಈ ಶಿಕ್ಷೆಯನ್ನು ಇಸ್ಲಾಮಾಬಾದ್ ಹೈಕೋರ್ಟ್ ರದ್ದುಗೊಳಿಸಿತ್ತು. ನಂತರ ಸರ್ಕಾರದ ರಹಸ್ಯಗಳನ್ನು ಬಹಿರಂಗಗೊಳಿಸಿದ ಸಿಫರ್ ಪ್ರಕರಣದಲ್ಲಿ ಅವರಿಗೆ ೧೦ ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.