ಹಾಸನ : ನಟ ಯಶ್ ತಾಯಿ ಪುಷ್ಪಾ ಅವರು ತಮ್ಮ ನಿವಾಸದ ಬಳಿ ನಿರ್ಮಿಸಿದ್ದ ಕಾಂಪೌಂಡ್‌ನ್ನು ನ್ಯಾಯಾಲಯದ ಆದೇಶದ ಮೇರೆಗೆ ಒಡೆದು ಹಾಕಲಾಗಿದೆ. ಹಾಸನ ನಗರದ ವಿದ್ಯಾನಗರ ದಲ್ಲಿ ಅವರ ಮನೆ ಇದೆ ಇವರು ನಿರ್ಮಿಸಿದ್ದ ಕಾಂಪೌಂಡ್‌ನ್ನು ಮೂಲ ಮಾಲೀಕ ನ್ಯಾಯಾಲಯದಲ್ಲಿ ದಾವೆ ಹೂಡಿ ಆದೇಶದನ್ವಯ ಬೆಳ್ಳಂಬೆಳಗ್ಗೆ ಜೆಸಿಬಿ ಮೂಲಕ ಕಾಂಪೌಂಡ್ ನೆಲಸಮಗೊಳಿಸಿದ್ದಾರೆ.
ಲಕ್ಷ್ಮಮ್ಮ ಎಂಬವರ ಜಾಗದಲ್ಲಿ ಅಕ್ರಮ ಕಾಂಪೌಂಡ್ ನಿರ್ಮಿಸಿದ್ದಾರೆಂದು ಆರೋಪಿಸಲಾಗಿತ್ತು. ಇದಲ್ಲದೆ 1,500 ಅಡಿ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂದು ದೇವರಾಜು ಎಂಬುವವರು ಕಿಡಿಕಾರಿದ್ದಾರೆ.ನ್ಯಾಯಾಲಯದ ಅನುಮತಿಯ ಮೇರೆಗೆ ಜಿಪಿಎ ಹೋಲ್ಡರ್ ಅಕ್ರಮ ಕಾಂಪೌಂಡ್ ತೆರವುಗೊಳಿಸಿದ್ದಾರೆ.ಆದರೆ ಇವರ ಆರೋಪಗಳನ್ನು ಯಶ್ ತಾಯಿ ಪುಷ್ಪಾ ಅವರು ಅಲ್ಲಗಳೆದಿದ್ದಾರೆ.



