Monday, April 7, 2025
Google search engine

HomeUncategorizedರಾಷ್ಟ್ರೀಯಜಾರಿ ನಿರ್ದೇಶನಾಲಯದ ದೂರು ಹಿನ್ನೆಲೆ ಕೇಜ್ರಿವಾಲ್ ಗೆ ಕೋರ್ಟ್ ನಿಂದ ಸಮನ್ಸ್

ಜಾರಿ ನಿರ್ದೇಶನಾಲಯದ ದೂರು ಹಿನ್ನೆಲೆ ಕೇಜ್ರಿವಾಲ್ ಗೆ ಕೋರ್ಟ್ ನಿಂದ ಸಮನ್ಸ್

ದೆಹಲಿ: ಜಾರಿ ನಿರ್ದೇಶನಾಲಯ ನೀಡಿದ ದೂರಿನ ಆಧಾರದಲ್ಲಿ ದೆಹಲಿ ಕೋರ್ಟ್ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಫೆ.17 ಕ್ಕೆ ಸಮನ್ಸ್ ಜಾರಿಗೊಳಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನ ಸಮನ್ಸ್ ಗೆ ಕೇಜ್ರಿವಾಲ್ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ ಕೋರ್ಟ್ ಮೊರೆ ಹೋಗಿತ್ತು. ದೂರನ್ನು ಪರಿಗಣಿಸಲಾಗಿದೆ ಮತ್ತು ಫೆಬ್ರವರಿ 17 ರಂದು ಹಾಜರಾಗುವಂತೆ ಕೇಜ್ರಿವಾಲ್ ಗೆ ಸಮನ್ಸ್ ನೀಡಲಾಗುತ್ತಿದೆ ಎಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಹೇಳಿದ್ದಾರೆ.

ಜಾರಿ ನಿರ್ದೇಶನಾಲಯ ತಮಗೆ ನೀಡಿದ್ದ 5ನೇ ಸಮನ್ಸ್‌ಗೆ ಕೇಜ್ರಿವಾಲ್ ಶುಕ್ರವಾರ ಗೈರಾಗಿದ್ದರು. ಕಳೆದ ಬುಧವಾರದಂದು ಸಂಸ್ಥೆ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.

ಎಎಪಿ ಇತ್ತೀಚಿನ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತಾನು ಆದೇಶವನ್ನು ಅಧ್ಯಯನ ಮಾಡುತ್ತಿದ್ದು ಸೂಕ್ತ ಕಾನೂನು ಸಲಹೆ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದೆ.

RELATED ARTICLES
- Advertisment -
Google search engine

Most Popular