Saturday, April 19, 2025
Google search engine

Homeಸ್ಥಳೀಯಸೌಜನ್ಯ ಪ್ರಕರಣ: ಆ.೨೮ರಂದು ಬೆಳ್ತಂಗಡಿಯಲ್ಲಿ ಸಭೆ

ಸೌಜನ್ಯ ಪ್ರಕರಣ: ಆ.೨೮ರಂದು ಬೆಳ್ತಂಗಡಿಯಲ್ಲಿ ಸಭೆ

ಮೈಸೂರು: ಸೌಜನ್ಯ ಹತ್ಯೆ ಪ್ರಕರಣವನ್ನು ಮರುತನಿಖೆ ಮಾಡಲು ಒತ್ತಾಯಿಸಿ ಆ.೨೮ರಂದು ರಾಜ್ಯ ಮಟ್ಟದಲ್ಲಿ ಬೆಳ್ತಂಗಡಿ ಚಲೋ ಪ್ರತಿಭಟನಾ ಸಭೆಯನ್ನು ಬೆಳ್ತಂಗಡಿಯಲ್ಲಿ ಆಯೋಜಿಸುತ್ತಿರುವುದಾಗಿ ಪ್ರಗತಿಪರ ಹೋರಾಟಗಾರ ನಾ.ದಿವಾಕರ್ ಹೇಳಿದರು.
ನಗರದ ಜಲದರ್ಶಿನಿಯಲ್ಲಿ ಅತಿಥಿಗೃಹದಲ್ಲಿ ಮೈಸೂರುಜಿಲ್ಲೆಯ ಪ್ರಗತಿಪರ ಸಂಘಟನೆಗಳ ಒಕ್ಕೂಟ ವತಿಯಿಂದ ಪ್ರತಿಭಟನಾ ಸಭೆಯ ಪೂರ್ವಭಾವಿಯಾಗಿ ಶನಿವಾರ ನೆಡೆದ ಸಭೆ ನಡೆಸಿ ಚರ್ಚಿಸಿ ಬಳಿಕ ಅವರು ಮಾತನಾಡಿದರು.

ಸೌಜನ್ಯ ಹತ್ಯೆ ಪ್ರಕರಣ ಸಂಬಂಧ ಶೀಘ್ರ ಮರುತನಿಖೆಯಾಗಬೇಕು. ತಪ್ಪಿಸ್ಥರಿಗೆ ಶಿಕ್ಷೆಯಾಗಬೇಕು. ಸೌಜನ್ಯ ಮತ್ತು ಸಂತೋಷ್‌ರಾವ್‌ಅವರಕುಟುಂಬಕ್ಕೆ ನ್ಯಾಯ ಸಿಗಬೇಕು. ಇಬ್ಬರಕುಟುಂಬಕ್ಕೂ ಪರಿಹಾರಒದಗಿಸಬೇಕುಎಂದು ಆಗ್ರಹಿಸಿ, ಬೆಳ್ತಂಗಡಿ ಚಲೋ ಆಯೋಜಿಸಲಾಗುತ್ತಿದ್ದು, ಇದಕ್ಕೆರಾಜ್ಯದ ವಿವಿಧ ಭಾಗಗಳಿಂದ ಬೆಂಬಲ ದೊರೆತಿದೆ. ವಿವಿಧ ಪ್ರಗತಿಪರ ಸಂಘಟನೆಗಳು ಮತ್ತು ಎಡಪಕ್ಷಗಳು ಬೆಳ್ತಂಗಡಿಯಲ್ಲಿ ಆ.೨೮ರಂದು ಸೇರಲಿದ್ದಾರೆ. ಇನ್ನು ಪ್ರಕರಣತನಿಖೆಯ ಸ್ವರೂಪಯಾವರೀತಿಯಲ್ಲಿಇರಬೇಕುಎಂದುಕುರಿತು ಬೆಂಗಳೂರಿನಲ್ಲಿ ನಡೆಯುವರಾಜ್ಯ ಮಟ್ಟದ ಸಭೆತಿರ್ಮಾನಿಸುತ್ತದೆಎಂದು ಮಾಹಿತಿ ನೀಡಿದರು.

ಮೈಸೂರು ಜಿಲ್ಲೆಯಿಂದ ದಲಿತ, ಕಾರ್ಮಿಕ, ರೈತ, ಮಹಿಳಾ, ಅಲ್ಪಸಂಖ್ಯಾತ, ವಿದ್ಯಾರ್ಥಿ ಸಂಘಟನೆಗಳು ಸೇರಿ ಸುಮಾರು ೨೫ ಸಂಘಟನೆಗಳು ಒಕ್ಕೂಟದಲ್ಲಿಇದ್ದು, ಎಲ್ಲರೂ ಬೆಂಬಲ ನೀಡುವರು. ಇದಕ್ಕೂ ಮುನ್ನ ಆ.೨೧-೨೨ರಂದು ಸೌಜನ್ಯ ಹತ್ಯೆ ಪ್ರಕರಣವನ್ನು ಮರುತನಿಖೆಗೆಒತ್ತಾಯಿಸುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಂದ ಕಾವ್ಯಾತ್ಮಕ ನೆಲೆಯಲ್ಲಿಯಾವರೀತಿಯ ಪ್ರತಿರೋಧ ಬರಲಿದೆಎಂಬುದನ್ನು ತಿಳಿಯಲು ಕಾರ್ಯಕ್ರಮವೊಂದನ್ನುರೂಪಿಸಲು ಚಿಂತಿಸಲಿದ್ದು, ಈ ಹಿನ್ನೆಲೆಯಲ್ಲಿಅಂತಿಮವಾಗಿ ಆ.೧೭ರಂದು ಎಲ್ಲ ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ಸಭೆ ಮಾಡಿ, ಕಾರ್ಯಕ್ರಮವನ್ನು ಹೇಗೆ ಮತ್ತುಎಲ್ಲಿ ಮಾಡಬೇಕು, ಬೆಳ್ತಂಗಡಿ ಚಲೋಗೆ ಮೈಸೂರಿನಿಂದ ಎಷ್ಟು ಮಂದಿ ಬರಲಿದ್ದಾರೆ. ಅಲ್ಲಿಗೆ ಪ್ರಯಾಣ ಮಾಡಲುಯಾವರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎಂದು ಚರ್ಚಿಸಿ ತೀರ್ಮಾನಿಸಲಾಗುವುದು. ಆ ನಂತರ ಸುದ್ದಿಗೋಷ್ಠಿಯನ್ನು ಮಾಹಿತಿ ನೀಡಲಾಗುವುದುಎಂದು ತಿಳಿಸಿದರು.

ಸಭೆಯಲ್ಲಿ ಪ್ರಗತಿಪರ ಹೋರಾಟಗಾರರಾದ ಸಬಿಹಾ ಭೂಮಿಗೌಡ, ಮಾಯಸಂದ್ರಕೃಷ್ಣಪ್ರಸಾದ್, ಜಿ.ಪಿ.ಬಸವರಾಜು, ಕೆ.ಆರ್.ಗೋಪಾಲ್, ಮುದ್ದುಸ್ವಾಮಿ, ಸವಿತಾ ಪ.ಮಲ್ಲೇಶ್, ಬಿ.ಸಿ.ಬೆಟ್ಟೇಗೌಡ, ಸುರೇಶ್, ಸ್ಟ್ಯಾನ್ಲಿ ಹಾಜರಿದ್ದರು.

RELATED ARTICLES
- Advertisment -
Google search engine

Most Popular